ಕುಂದಗೋಳ: ಮಾನ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನಿಮಗೊಂದು ಥ್ಯಾಂಕ್ಸ್ ನೋಡ್ರಿ, ಅರೆ ! ಥ್ಯಾಂಕ್ಸ್ ಯಾಕ್ ಅಂದ್ರಿ ಏನ್ರಿ ? ಆದೇ ರೀ, ನಿನ್ನೆ ನಾವು ಕೊಂಕಣಕುರಹಟ್ಟಿ ಚಾಕಲಬ್ಬಿ ಮಾರ್ಗದ ಸಂಶಿ ಸಂಪರ್ಕ ಮಾಡೋ ರಸ್ತೆ ಕಾಮಗಾರಿ ಕಳಪೆ ಆಗಿದ್ದಕ್ಕ ವರದಿ ಮಾಡಿದ್ವಿ. ಅದ್ನ ನೋಡಿ ನೀವೂ ಇವತ್ತ್ ನೀವು ಸ್ಥಳಕ್ಕೆ ಭೇಟಿ ಕೊಟ್ರಿ ಅದ್ಕನ ನಮ್ದು ಸಲಾಮ್.
ಮತ್ತ್, ಭೇಟಿ ಕೊಡೋದು ಅಷ್ಟೇ ಅಲ್ಲಾ ಎಲ್ಲೇಲ್ಲಿ ಕಳಪೆ ಕಾಮಗಾರಿ ಆಗೇತಿ ಅದ್ನ ಸ್ವತಃ ಪರಿಶೀಲನೆ ಮಾಡಿ, ಆ ರಸ್ತೆ ಮತ್ತ್ ಡಾಂಬಾರ್ ಮಾಡಾಕ್ ಹೇಳಿರಲ್ಲ ಅದ್ಕ ನಿಮ್ಮ ಕರ್ತವ್ಯ ನೋಡಿ ಜನಾ, ಭೇಷ್ ಅಂದಾರ್ ನೋಡ್ರಿ.
ಅಲ್ದ 7 ಲಕ್ಷದ ಕಾಮಗಾರಿ ಇದ್ರೂ, ನಿನ್ನೆ ಗುತ್ತಿಗೆದಾರರು ಡಾಂಬರ್ ಹಾಕ್ದೆ ಕೈ ಬಿಟ್ಟಂತಹ ಸಣ್ಣ ಸಣ್ಣ ತಗ್ಗು ಗುಂಡಿ ಎಲ್ಲಾ ಡಾಂಬರ್ ಹಾಕಿಸಿ ಭರ್ತಿ ಮಾಡಿಸಿ, ಜನರಿಗೆ ಚಲೋ ರಸ್ತೆ ಮಾಡಾಕ್ ಗುತ್ತಿಗೆದಾರರು ಜನರ ಸಮ್ಮುಖದಲ್ಲೇ ನಿರ್ಧಾರ ಮಾಡೀರಿ, ಈ ನಿಮ್ಮ ನಿರ್ಧಾರಾ ಪಬ್ಲಿಕ್ ನೆಕ್ಸ್ಟ್ ಮಾಡಿರೋ ವರ್ದಿ ಬಗ್ಗೆ ಅಲ್ಲಿನ ಮಂದಿ ಏನು ಹೇಳ್ಯಾರ ಕೇಳ್ರಿ.
ಒಟ್ನಾಗ್,ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ, ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿರೋ ಒಂದೇ ವರದಿ ಪರಿಣಾಮ, ಕಳಪೆ ಕಾಮಗಾರಿ ನಿಂತು ಹೋತೂ. ಹೊಸಾ ಕಾಮಗಾರಿ ಚಾಲೂ ಆತು. ಇದ್ರಂಗ ಎಲ್ಲಾ ಕಾಮಗಾರಿ ಹಿಂಗ್ ಆಗ್ಲಿ ಅನ್ನೋದು ಜನ್ರ ಕಳಕಳಿ ನೋಡ್ರಿ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
Kshetra Samachara
24/02/2022 11:17 am