", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737106351-A4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Keshav Nadakarni" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರಕಾರ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇಸಬೇಕೆಂದು ಒತ್ತಾಯಿಸಿ ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕ...Read more" } ", "keywords": "Hubballi, senior citizens, demands, protest march, Hubballi protest, Karnataka news, elderly welfare, citizen rights, demonstration, rally for senior citizens.,Hubballi-Dharwad,Infrastructure,Government,News,Public-News", "url": "https://publicnext.com/node" }
ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರಕಾರ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇಸಬೇಕೆಂದು ಒತ್ತಾಯಿಸಿ ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘದ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಮೆರವಣಿಗೆ ಏರ್ಪಡಿಸಲಾಗಿತ್ತು.
ನೆಹರು ಮೈದಾನದಿಂದ ಆರಂಭವಾದ ಮೆರವಣಿಗೆಯನ್ನು ಅಖಿಲ ಭಾರತ ಹಿರಿಯ ನಾಗರಿಕರ ಜೀವನ ಅಭಿಯಾನದ ಅಧ್ಯಕ್ಷರಾದ ವಿಜಯ ದೇಶಮುಖ ಉದ್ಘಾಟಿಸಿದರು. ಖ್ಯಾತ ಅರ್ಥಶಾಸ್ತ್ರಜ್ಞ ಅನಿಲ್ ಬೋಕಿಲ್ ಜಿ ಹಾಗೂ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ಸಲಹೆಗಾರ ಡಾ:ಸ್ವಾಮಿ ಕಮಲ್ ಮನೋಹರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಶದ ಎಲ್ಲ ಹಿರಿಯ ನಾಗರಿಕರು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು, ಆರ್ಥಿಕವಾಗಿ ದುರ್ಬಲವಾಗಿರುವ ಎಲ್ಲ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಹತ್ತು ಸಾವಿರ ರೂ ಗೌರವಧನ ನೀಡಬೇಕು ಹಾಗೇ ರಾಜ್ಯ ಸರಕಾರ ನೀಡುವ ವೃದ್ದಾಪ್ಯ ವೇತನವನ್ನು ಐದು ಸಾವಿರಕ್ಕೆ ಹೆಚ್ಚಿಸುವುದು ಸೇರಿದಂತೆ ತಮ್ಮಒಟ್ಟು 17 ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಈಡೇರಿಸಬೇಕೆಂದು ಮೆರವಣಿಗೆ ಸಮಯದಲ್ಲಿ ಒತ್ತಾಯಿಸಲಾಯಿತು.
ಹಿರಿಯ ನಾಗರಿಕರ ಬೇಡಿಕೆಗಳನ್ನು ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸೇರ್ಪಡೆ ಮಾಡಿ ಅವುಗಳನ್ನು ಈಡೇರಿಸಬೇಕೆಂದು ಸಹ ಆಗ್ರಹಿಸಲಾಯಿತು.
ನಗರದ ನೆಹರು ಮೈದಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳು ಮೂಲಕ ಹಾಯ್ದು ತಹಶೀಲ್ದಾರ್ ಕಚೇರಿ ತಲುಪಿತು. ಸಂಘದ ಅಧ್ಯಕ್ಷ ಬಿ.ಎ ಪಾಟೀಲ್ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಂಘದ ನೂರಾರು ಸದಸ್ಯರು ಭಾಗವಿಸಿದ್ದರು.
ಉಪಾಧ್ಯಕ್ಷ ಲಿಂಗರಾಜ್ ಅಂಗಡಿ, ಧರಣೇಂದ್ರ ಜವಳಿ, ಆರ್.ಕೆ ಮಠದ, ಎಂ.ಡಿ ಪಾಟೀಲ್, ಪಿ.ಪಿ ಗಾಯಕವಾಡ್, ಮಹಿಳಾ ಹಿರಿಯ ನಾಗರಿಕ ಸಮಿತಿ ಅಧ್ಯಕ್ಷೆ ಎಂ.ಪಿ ಕುಂಬಾರ್, ಡಾ: ಸುನಂದಾ ಬೆನ್ನೂರ್ ಸೇರಿದಂತೆ ನೂರಾರು ಮಹಿಳೆಯರು ಮೆರವಣಿಯಲ್ಲಿ ಭಾಗವಸಿದ್ದರು.
Kshetra Samachara
17/01/2025 03:02 pm