", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1737112225-dwd2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಯು ಸುಮಾರು ಆರು ತಿಂಗಳಿನಿಂದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದ್ದು, ಬಿಲ್ ಕಟ್ಟದ ಹಿನ್...Read more" } ", "keywords": "Dharwad, pending bill, Sub Registrar office, Hescom, electricity connection, power supply, Karnataka news, Dharwad news, Hubballi news, electricity department, government offices, public services, Karnataka administration.,Hubballi-Dharwad,Infrastructure,Government", "url": "https://publicnext.com/node" } ಧಾರವಾಡ: ಬಿಲ್ ಬಾಕಿ ಇರಿಸಿಕೊಂಡ ಸಬ್‌ ರಿಜಿಸ್ಟ್ರಾರ್ ಕಚೇರಿ - ಪ್ಯೂಸ್ ಕಿತ್ತುಕೊಂಡ ಹೋದ ಹೆಸ್ಕಾಂ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಿಲ್ ಬಾಕಿ ಇರಿಸಿಕೊಂಡ ಸಬ್‌ ರಿಜಿಸ್ಟ್ರಾರ್ ಕಚೇರಿ - ಪ್ಯೂಸ್ ಕಿತ್ತುಕೊಂಡ ಹೋದ ಹೆಸ್ಕಾಂ

ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಯು ಸುಮಾರು ಆರು ತಿಂಗಳಿನಿಂದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದ್ದು, ಬಿಲ್ ಕಟ್ಟದ ಹಿನ್ನೆಲೆ ಹೆಸ್ಕಾಂ ಸಿಬ್ಬಂದಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ವಿದ್ಯುತ್ ಪ್ಯೂಸ್‌ನ್ನೇ ಕಿತ್ತುಕೊಂಡು ಹೋಗಿದೆ.

ಹೌದು! ಆಸ್ತಿ ನೋಂದಣಿ, ಖರೀದಿ, ಬೋಜಾ ಸೇರಿದಂತೆ ಇತ್ಯಾದಿ ಕೆಲಸಗಳಿಗಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ನಿತ್ಯ ಸಾವಿರಾರು ಜನ ಬರುತ್ತಾರೆ. ಪ್ರತಿನಿತ್ಯ ಈ ಇಲಾಖೆ ಲಕ್ಷಾಂತರ ರೂಪಾಯಿ ವಹಿವಾಟು ಕೂಡ ಮಾಡುತ್ತದೆ.

ಆದರೆ, ಆರು ತಿಂಗಳಿನಿಂದ ಈ ಇಲಾಖೆ ಅಂದಾಜು ಒಂದೂವರೆ ಲಕ್ಷ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದ್ದು, ಹೆಸ್ಕಾಂ ಶುಕ್ರವಾರ ಏಕಾಏಕಿ ಕಚೇರಿಯಲ್ಲಿನ ವಿದ್ಯುತ್ ಪ್ಯೂಸ್ ಕಿತ್ತುಕೊಂಡು ಹೋಗಿದ್ದರಿಂದ ಕಚೇರಿಯಲ್ಲಿನ ಎಲ್ಲ ಕೆಲಸಗಳು ಬಂದ್ ಆಗಿದ್ದವು.

ಕಚೇರಿಯಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಜನರೇಟರ್ ಕೂಡ ಇದೆ. ಆದರೆ, ಆ ಜನರೇಟರ್‌ನಲ್ಲಿ ಡೀಸೆಲ್ ಸಹ ಇರಲಿಲ್ಲ. ಜನರೇಟರ್ ರಿಪೇರಿ ಮಾಡುವವರು ಸ್ಥಳಕ್ಕೆ ಬಂದು ಅದನ್ನು ರಿಪೇರಿ ಮಾಡಿದ್ದರಿಂದ ಕಚೇರಿಯಲ್ಲಿನ ಕೆಲ ಕಂಪ್ಯೂಟರ್‌ಗಳು ಕಾರ್ಯಾರಂಭ ಮಾಡಿದವು. ಶುಕ್ರವಾರ ತಮ್ಮ ಕೆಲಸಕ್ಕಾಗಿ ನೂರಾರು ಜನ ಕಚೇರಿಗೆ ಬಂದಿದ್ದರು. ಕಚೇರಿಯಲ್ಲಿ ವಿದ್ಯುತ್ ಇಲ್ಲದೇ ಇದ್ದಿದ್ದರಿಂದ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ಸಹ ತೆಗೆದುಕೊಂಡರು. ಕೆಲವರಂತೂ ಕಚೇರಿಯ ಹೊರ ಭಾಗದಲ್ಲಿ ಕುಳಿತ ದೃಶ್ಯ ಕಂಡು ಬಂತು.

ಈ ಸಮಸ್ಯೆ ಕುರಿತು ಹಿರಿಯ ಉಪನೋಂದಣಾಧಿಕಾರಿಗೆ ಕೇಳಿದರೆ ಈಗಾಗಲೇ 83 ಸಾವಿರ ಬಿಲ್ ಕಟ್ಟಿದ್ದೇವೆ. ಇನ್ನೊಂದು ತಾಸಿನಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎನ್ನುತ್ತಾರೆ.

ಧಾರವಾಡದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಉಪ ನೋಂದಣಾಧಿಕಾರಿ ಕಚೇರಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತದೆ.

ಆದರೆ, ವಿದ್ಯುತ್ ಬಿಲ್ ಕಟ್ಟಲು ಈ ಕಚೇರಿಗೆ ಆಗುತ್ತಿಲ್ಲ ಎಂದು ನಗೆಪಾಟಲಿಗೆ ಈಡಾಗುವಂತಾಯಿತು. ಸರ್ಕಾರದಿಂದ ನಮಗೆ ಅನುದಾನ ಬಂದಿಲ್ಲ. ಹೀಗಾಗಿ ಈ ಸಮಸ್ಯೆಯಾಗಿದೆ ಎಂಬ ಸಬೂಬನ್ನು ಅಧಿಕಾರಿಗಳು ಹೇಳುತ್ತಿದ್ದು, ಇದರ ಮಧ್ಯೆ ಸಾರ್ವಜನಿಕರು ಹೈರಾಣಾಗುತ್ತಿರುವುದಂತೂ ಸುಳ್ಳಲ್ಲ.

Edited By : Manjunath H D
Kshetra Samachara

Kshetra Samachara

17/01/2025 04:41 pm

Cinque Terre

22.1 K

Cinque Terre

4

ಸಂಬಂಧಿತ ಸುದ್ದಿ