ಹುಬ್ಬಳ್ಳಿ: ನೋಡ್ರಿ.... ನೋಡ್ರಿ...ಇದು ರಸ್ತೆನೋ ಅಥವಾ ಕೆರೆಯೋ ಎಂಬುದು ತಿಳಿವಲ್ದ ನೋಡ್ರಿ... ಇಲ್ಲಿ ದಿನಕ್ಕ ಸಾವಿರಾರು ಮಂದಿ ಬಂದು ವ್ಯಾಪಾರ ಮಾಡ್ಕೊಂಡ ಹೋಗ್ತಾರ...ಆದರ ಇದ್ದ ರಸ್ತೆಯನ್ನ ಅಧಿಕಾರಿಗಳು ಸ್ಮಾರ್ಟ್ ಮಾಡ್ತೆವಿ ಅಂತ ಹೇಳಿ ರೋಡ್ ಅಗದು ಹೋದವರು ಇನ್ನೂವರೆಗೂ ಈ ನೋಡೇ ಇಲ್ಲ ಅಂತ ಇಲ್ಲಿನ ವ್ಯಾಪಾರಸ್ಥರು ಫುಲ್ ಗರಂ ಆಗಿಬಿಟ್ಟಾರ...
ಎಸ್...ನಮ್... ಮೂರುಸಾವಿರ ಮಠದ ಬಳಿ ಇರುವ ಅಂಚಟಗೇರಿ ಓಣಿಯ ಪರಿಸ್ಥಿತಿ ನೋಡಿದ್ರ ಸಾಕ್... ಎಲ್ಲಾರೂ ಶಾಕ್ ಆಗ್ತಾರ್.. ಸ್ಮಾರ್ಟ್ ಸಿಟಿ ಅಡಿಯಲ್ಲಿ ರೋಡ್ ಮಾಡ್ತೇವಿ ಅಂತ ಇದ್ದ ರಸ್ತೆಯನ್ನ ಅಗದ ಹೋಗ್ಯಾರ.... ಆದರ ಒಂದೂವರೆ ತಿಂಗಳ ಆಯ್ತು ನೋಡ್ರಿ... ಇನ್ನೂ ಯಾವ ಅಧಿಕಾರಿಯೂ ತಿರುಗಿ ಈ ಕಡೆ ಬಂದೇ ಇಲ್ಲ ಅಂತ ಅಲ್ಲಿನ ವ್ಯಾಪಾರಸ್ಥರು ಮತ್ತ ನಿವಾಸಿಗಳು ಹೇಳ್ತಾರ
ಅಷ್ಟೇ ಅಲ್ದೆ ಈ ಅಂಚಟಗೇರಿ ಓಣಿಯ ರಸ್ತೆ ಸಮಸ್ಯೆ ಬಗ್ಗೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರನ್ನ ಕೇಳಿದ್ರ.... ಅಲ್ಲಿ ಎಷ್ಟೋ ಜನರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಾರ. ಈಗಾಗಲೇ ವಲಯ ಅಧಿಕಾರಿಗಳಿಗೆ ತಿಳಿಸಿದ ಹಾಗೆ... ಅಳತೆ ತೊಗೊಂಡು ಮುಂದಿನ ರಸ್ತೆ ಮಾಡ್ತೇವಿ ಅಂತ ಹೇಳ್ತಾರ.
ಒಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಗೆದಿರುವ ರಸ್ತೆಯನ್ನು ಆದಷ್ಟು ಬೇಗ ಕಾಮಗಾರಿ ಮಾಡಬೇಕು ಅನ್ನೂದು ಜನರ ಒತ್ತಾಯ
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
23/02/2022 10:43 am