ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಸುಗಮ ಸಂಚಾರಕ್ಕೆ ದಾರಿ ಯಾವುದಯ್ಯಾ.?

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಸ್ತೆ ಹುಡುಕಿಕೊಂಡು ಸುಗಮ ಸಂಚಾರ ಮಾಡುವುದೇ ಒಂದು ದೊಡ್ಡ ಸವಾಲಾಗಿದೆ. ಇದರ ಮಧ್ಯದಲ್ಲಿ ಕಾಮಗಾರಿ ನಡೆಯುತ್ತಿರುವ ಮಾರ್ಗದಲ್ಲಿಯೇ ವಾಹನ ಸಂಚಾರ ಮಾಡಬೇಕು ಅಂದರೆ ನಿಜಕ್ಕೂ ಅದೊಂದು ದೊಡ್ಡ ಹರಸಾಹಸವೇ ಸರಿ.

ಹೌದು. ಸ್ಮಾರ್ಟ್‌ ಸಿಟಿ ಹಾಗೂ ಸಿಆರ್‌ಎಫ್ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜೆಸಿಬಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರು ಕಾಮಗಾರಿ ನಡೆಯುತ್ತಿರುವ ಮಾರ್ಗದಲ್ಲಿಯೇ ದಾರಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಅಲ್ಲದೇ ಕೆಲವೊಂದು ಕಡೆಗಳಲ್ಲಿ ಅವ್ಯವಸ್ಥೆವಾಗಿ ಜೆಸಿಬಿಗಳನ್ನು ಮಾರ್ಗ ಮಧ್ಯದಲ್ಲಿ ನಿಲ್ಲಿಸಿರುವುದರಿಂದ ಜೆಸಿಬಿಯ ಕೆಳಗೆ ಹಾದು ಜನರು ಹೋಗುವಂತಾಗಿದೆ.

ಇನ್ನೂ ಇಂತಹ ಘಟನೆ ನಡೆದಿದ್ದು, ಹುಬ್ಬಳ್ಳಿಯ ಮೂರುಸಾವಿರ ಮಠದ ರಸ್ತೆಯಲ್ಲಿ ಸುಮಾರು ದಿನಗಳಿಂದ ಕೆಲಸ ನಡೆಯುತ್ತಿದ್ದು, ವಾಹನ ಸವಾರರು ಜೆಸಿಬಿಯ ಕೆಳಗೆ ಹಾದು ಸಂಚಾರ ಮಾಡುತ್ತಿರುವ ದೃಶ್ಯಗಳು ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ.

Edited By : Nagesh Gaonkar
Kshetra Samachara

Kshetra Samachara

15/02/2022 10:11 pm

Cinque Terre

70.39 K

Cinque Terre

9

ಸಂಬಂಧಿತ ಸುದ್ದಿ