ಕುಂದಗೋಳ : ಕಳೆದ ಹಲವಾರು ದಿನಗಳಿಂದ ಸಾರಿಗೆ ಸಮಸ್ಯೆ ಎದುರಿಸುತ್ತಿದ್ದ ಚಾಕಲಬ್ಬಿ ಗ್ರಾಮಕ್ಕೆ ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿದೆ.
ಚಾಕಲಬ್ಬಿ ಗ್ರಾಮದಿಂದ ಸಂಶಿ, ಕುಂದಗೋಳ, ಹುಬ್ಬಳ್ಳಿ ಸೇರಿದಂತೆ ಬೇರೆಡೆ ಪ್ರಯಾಣ ಬೆಳೆಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ, ಸಂಶಿ ಕ್ರಾಸ್'ನಲ್ಲಿ ಕಾರು, ಬೈಕ್, ಲಾರಿ, ಟ್ರ್ಯಾಕ್ಟರ್ ಹೀಗೆ ಅಪರಿಚಿತ ವಾಹನ ಸವಾರರಿಗೆ ಕೈ ಮಾಡಿ ಊರು ಸೇರುವುದು ಸಾಕಾಗಿ ಕಳೆದ ಗುರುವಾರ ಸಂಶಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ವಿಷಯವನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿ ಎಲ್ಲಿದೆ ಸಾರಿಗೆ ? ದಾರಿ ಕಾಯಿರಿ ಖಾಸಗಿ ಗಾಡಿಗೆ ! ಎಂಬ ಶಿರ್ಷಿಕೆ ಅಡಿಯಲ್ಲಿ ಸ್ಥಳೀಯ ಶಾಸಕರು ಹಾಗೂ ಸಾರಿಗೆ ಅಧಿಕಾರಿಗಳಿಗೆ ಮನ ಮುಟ್ಟುವಂತೆ ವರದಿ ಪ್ರಕಟಿಸಿತ್ತು.
ಸದ್ಯ ನಮ್ಮ ವರದಿ ಫಲವಾಗಿ ಇಂದು ಚಾಕಲಬ್ಬಿ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಒದಗಿ ಬಂದಿದ್ದು, ಗ್ರಾಮಸ್ಥರು ಸಾರಿಗೆ ಬಸ್ ತಳಿರು, ತೋರಣ, ಹೂ ಮಾಲೆ ಹಾಕಿ ಪೂಜೆ ಮಾಡಿ ತಮ್ಮ ಗ್ರಾಮಕ್ಕೆ ನೂತನ ಬಸ್ಸನ್ನು ಬರ ಮಾಡಿಕೊಂಡಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
29/01/2022 05:36 pm