ಹುಬ್ಬಳ್ಳಿ : ತಮ್ಮ ಜನ್ಮದಿನ ಬಂತೆಂದ್ರೇ ಕೇಕ್ ಕತ್ತರಿಸಿ ಸ್ನೇಹಿತನ ಜನ್ಮದಿನ ಆಚರಿಸಿ ಮಗಾ ಪಾರ್ಟಿ ಕೋಡೋ, ಎನ್ನುವವರ ಮಧ್ಯೆ ಇಲ್ಲೊಬ್ಬ ಸ್ನೇಹಿತನ ಜನ್ಮದಿನಕ್ಕೆ ಯುವಕರು ರಕ್ತವನ್ನೇ ಕೊಟ್ಟಿದ್ದಾರೆ.
ಇದೇನಪ್ಪಾ ! ಎಂದು ಆಶ್ಚರ್ಯ ಪಟ್ರಾ ? ಏನಿಲ್ಲ ಸ್ವಾಮಿ ರಕ್ತ ಕೊಟ್ಟಿರೋದು ಮತ್ತೊಬ್ಬರ ಜೀವಕ್ಕೆ ಬೆಳಕಾಗಲು,
ಹೌದು, ಹುಬ್ಬಳ್ಳಿ ನಗರದ ಉಣಕಲ್ ನಿವಾಸಿ ರಾಜಕಿರಣ್ ಪವಾರ್ ಅವರ 32ನೇ ಜನ್ಮದಿನದ ಅಂಗವಾಗಿ ಆರ್.ಕೆ.ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆತನ ಸ್ನೇಹಿತರು 32 ಜನರು ಒಟ್ಟಿಗೆ ರಕ್ತದಾನ ಮಾಡಿ ಶ್ರೇಷ್ಠತೆ ಮೆರೆದರು.
ರಾಜಕಿರಣ್ ಪವಾರ್ ಅವರ ಜನ್ಮದಿನಕ್ಕೆ ನಾಗರಾಜ ಭವಾನಿ, ತನ್ವೀರ್ ಹಾಗೂ ಸುನೀಲ್, ದೇವರಾಜ್ ಕೋಟೆ, ಸಿದ್ದು ಕಟ್ಟಿಮನಿ, ಹಾಗೂ ಇತರರು ಇಂತಹ ರಕ್ತದಾನದಂತ ಪುಣ್ಯದ ಕಾಯಕ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾದವರು.
Kshetra Samachara
17/01/2022 08:55 pm