ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹೆಸ್ಕಾಂ ಗ್ರಾಹಕರೇ ನಿಮ್ಮ ಸಮಸ್ಯೆಗೆ ನೇರ ಕಚೇರಿಗೆ ಬನ್ನಿ ಧರಣಿ ಕೈ ಬಿಡಿ

ಕುಂದಗೋಳ: ಇತ್ತಿಚೆಗೆ ಹಳ್ಳಿಗಳಲ್ಲಿ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಬಿಲ್ ತುಂಬಿವಂತೆ ಜನರಿಗೆ ಮನವಿ ಮಾಡಿ ಬಿಲ್ ತುಂಬದೇ ಇದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಹೆಸ್ಕಾಂ ಇಲಾಖೆ ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದ್ದಾರೆ.

ಅತಿವೃಷ್ಟಿ ಸಂಕಷ್ಟಕ್ಕೆ ಸಿಲುಕಿದ ರೈತರು ಗ್ರಾಮಸ್ಥರು ಬಿಲ್ ತುಂಬದೆ, ನಿದ್ಯುತ್ ಕಡಿತ ಮಾಡಿದ್ದಕ್ಕಾಗಿ ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ಜೊತೆ ಮಾತಿನ ಚಕಮಕಿ ಸಹ ನಡೆದಿವೆ, ಈ ವಿಚಾರವಾಗಿ ಹೆಸ್ಕಾಂ ಇಲಾಖೆ ಅಧಿಕಾರಿಗಳು ಗ್ರಾಹಕರ ಎನೇ ತೊಂದರೆ, ವಿದ್ಯುತ್ ಬಿಲ್ ತುಂಬಲು ಸಮಸ್ಯೆ, ಇತರೆ ಕಾರಣ ಇದ್ದಲ್ಲಿ ನೇರ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಎನ್ನುತ್ತಿದ್ದಾರೆ.

ಈಗಾಗಲೇ ಕುಂದಗೋಳ ತಾಲೂಕಿನ ಹಲವು ಹಳ್ಳಿಗರು ಹೆಸ್ಕಾಂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಚೇರಿ ಎದುರು ಧರಣಿ ನಡೆಸಿದ್ದು ಇಂತಹ ಕ್ರಮ ಕೈ ಬಿಡುವಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.

ಇನ್ನೂ ಭಾಗ್ಯಜ್ಯೋತಿ ಫಲಾನುಭವಿಗಳು ಸಹ 40 ಯೂನಿಟ್ ವಿದ್ಯುತ್'ಗಿಂತ ಹೆಚ್ಚಿನ ವಿದ್ಯುತ್ ಬಳಸಿದ್ದಲ್ಲಿ ಬಿಲ್ ತುಂಬುವಂತೆ ಮನವಿ ಮಾಡಿ ಯಾವುದೇ ಪ್ರತಿಭಟನೆ ಹಾಗೂ ಹೆಸ್ಕಾಂ ಇಲಾಖೆ ಕರ್ತವ್ಯಕ್ಕೆ ಅಡ್ಡಿ ಪಡಿಸದಂತೆ ತಿಳಿಸಿದ್ದಾರೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

01/01/2022 10:15 am

Cinque Terre

33.41 K

Cinque Terre

1

ಸಂಬಂಧಿತ ಸುದ್ದಿ