ಅಣ್ಣಿಗೇರಿ: ಪುರಸಭೆಯ ಚುನಾವಣೆಯ ಸಾರ್ವತ್ರಿಕ 2021 ರ ಚುನಾವಣೆ ವೀಕ್ಷಕರಾದ ರುದ್ರೇಶ್ ಎಸ್.ಎನ್ ರವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ವಯ ಸಭೆ ಸಮಾರಂಭ ನಡೆಸಲು ಹಾಗೂ ಪ್ರಚಾರ ಕೈಗೊಳ್ಳಲು ಪಾಲಿಸಬೇಕಾದ ನೀತಿ-ನಿಯಮಗಳ ಮತ್ತು ಕೋವಿಡ್ 19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡುವ ಕುರಿತು, ಚುನಾವಣೆಗಳ ಖರ್ಚುವೆಚ್ಚಗಳ ಪ್ರತಿದಿನ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಗಳನ್ನು ಸಲ್ಲಿಸಲು ಪುರಸಭೆ ಚುನಾವಣೆಯ ವೀಕ್ಷಕರಾದ ರುದ್ರೇಶ್ ರವರು ವಿವರಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಕ್ಷದ ಮುಖಂಡರು, ಅಭ್ಯರ್ಥಿಗಳು, ಅಧಿಕಾರಿಗಳ ಸಭೆ ಆಯೋಜಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿಯೇ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿ ಜೂಲಕಟ್ಟಿ ಅವರು ಮಾತನಾಡಿ ಶಾಂತಿಯುತವಾಗಿ ಕಾನೂನು ಪ್ರಕಾರ ನಿರ್ವಹಿಸಲು ಎಲ್ಲ ಮುಖಂಡರಿಗೆ ಹಾಗೂ ಅಭ್ಯರ್ಥಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಎಲ್ಲ ಪಕ್ಷದ ಮುಖಂಡರು, ಅಭ್ಯರ್ಥಿಗಳು, ಚುನಾವಣೆಗೆ ನೇಮಕಗೊಂಡ ಅಧಿಕಾರಿಗಳು, ಹಾಗೂ ಪುರಸಭೆಯ ಮುಖ್ಯ ಅಧಿಕಾರಿ ಕೆ.ಎಫ್. ಕಟಗಿ ಉಪಸ್ಥಿತರಿದ್ದರು.
Kshetra Samachara
22/12/2021 04:12 pm