ಹುಬ್ಬಳ್ಳಿ: ಕಳೆದ ನಾಲ್ಕು ವರ್ಷಗಳಿಂದ ನೆಹರು ಮೈದಾನದ ಅಕ್ಕಪಕ್ಕದ ರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಸಿಸಿ ರಸ್ತೆ ಮಾಡುವುದಕ್ಕೆ ಇದ್ದ ರಸ್ತೆಯನ್ನು ಅಗೆದಿದ್ದರಿಂದ ಇಲ್ಲಿನ ವ್ಯಾಪಾರಸ್ಥರು ಧೂಳಿನಲ್ಲಿ ಜೀವನ ನಡೆಸಬೇಕಾಗಿತ್ತು, ಈ ಸಮಸ್ಯೆ ಕುರಿತು ಎಷ್ಟೋ ಬಾರಿ ಸಂಬಂಧಿಸಿದ ಅಧಿಕಾರಿಗಳಿ ಮನವಿ ನೀಡಿದರು ಯಾರು ಕೂಡ ಕ್ಯಾರೆ ಎನ್ನದೆ ಕಾರಣ, ಇಂದು ಅಲ್ಲಿನ ವ್ಯಾಪಾರಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಿದರು, ನಂತರ ಬಂದ ಸ್ಮಾರ್ಟ್ ಸಿಟಿ, ಹಾಗೂ ವಲಯ ಅಧಿಕಾರಿಗಳು ಬಂದು 10 ದಿನಗಳ ವರೆಗೆ ರಸ್ತೆ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ. ಮಾಡದೆ ಇದ್ದರೆ ಮುಂದಿನ ದೀನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Kshetra Samachara
02/11/2021 04:25 pm