ಧಾರವಾಡ: ಇಲ್ಲಿನ ಪಿ ಡಬ್ಲ್ಯೂ ಡಿ ಇಲಾಖೆಯ ಕೆಲ ಅಧಿಕಾರಿಗಳು ಪ್ರಭಾವಿ ಗುತ್ತಿಗೆದಾರರ ಜೊತೆಗೆ ಶಾಮೀಲಾಗಿ ಮ್ಯಾನುವೆಲ್ ಟೆಂಡರ್ ಮೂಲಕ ಗೋಲ್ಮಾಲ್ ಮಾಡಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪವನ್ನು ಡಾ:ಬಿ ಆರ್ ಅಂಬೇಡ್ಕರ್ ದಲಿತ ಗುತ್ತಿಗೆದಾರರ ಸಂಘ ಮಾಡಿದೆ.
ಈ ಬಗ್ಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್,ಜಿಲ್ಲಾಧಿಕಾರಿ ಕಚೇರಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಲೈಸನ್ಸ್ ಪಡೆದು ಮೂರ್ನಾಲ್ಕು ವರ್ಷಗಳಾದರೂ ಅನೇಕ ಗುತ್ತಿಗೆದಾರರಿಗೆ ಕೆಲಸ ಸಿಕ್ಕಿರುವುದಿಲ್ಲ.ಕಚೇರಿ ಕಡೆಗೆ ಸುಳಿಯದ ಗುತ್ತಿಗೆದಾರರ ಹೆಸರಿನಲ್ಲಿ ಕೆಲ ಅಧಿಕಾರಿಗಳು ಸಹಿಯಿಂದ ಹಿಡಿದು ಬಿಲ್ ಆಗುವ ತನಕ ಕೆಲಸ ಮಾಡುತ್ತಿದ್ದಾರೆ.ಎರಡು ಮೂರು ಕೆಲಸಗಳನ್ನು ಕರೆದು ದಲಿತರ ಶೇ.24.10 ಮೀಸಲಾತಿಯನ್ನ ತಪ್ಪಿಸಲಾಗುತ್ತಿದೆ ಅನ್ನೋ ವಿಚಾರ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಹೀಗಾಗಿ ಲೋಕೋಪಯೋಗಿ ಇಲಾಖೆಯ ಎಲ್ಲ ಕಾಮಗಾರಿಗಳನ್ನ ಇ-ಟೆಂಡರ್ ಮೂಲಕ ಕರೆಯಬೇಕೆಂದು ಮನವಿ ಸಲ್ಲಿಸಿದ್ದಾರೆ.
ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ.ಹೀಗಾಗಿ ಎಇಇ ಅವರಿಗೆ ನಾನು ಅಧಿಕಾರವನ್ನು ಕೊಟ್ಟಿದ್ದೇನೆ ಎಂದು ಕಾರ್ಯ ನಿರ್ವಾಹಕ ಇಂಜಿನಿಯರ್ ಹೇಳುತ್ತಿದ್ದಾರೆ.ನಾವು ಏನೇ ಮಾಹಿತಿ ಪಡೆಯಬೇಕಾದರು 70-80 ಕಿ ಮೀ ದೂರ ಹೋಗಬೇಕು.ಇದರಿಂದಾಗಿ ನಮಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.ಈ ಮೂಲಕ ಅವರಿಗೆ ಅಕ್ರಮ ಮಾಡಲು ಸುಲಭವಾಗಿದೆ ಎಂದು ಡಾ.ಬಿ ಆರ್ ಅಂಬೇಡ್ಕರ್ ದಲಿತ ಗುತ್ತಿಗೆದಾರರ ಸಂಘ ದ ಅಧ್ಯಕ್ಷ ಫಕ್ಕೀರಪ್ಪ ಏಳಗುಡ್ಡ ಆರೋಪಿಸಿದ್ದಾರೆ.
ಈ ವೇಳೆ ಮಹಾನಾಯಕ ಡಾ.ಬಿ ಆರ್ ಅಂಬೇಡ್ಕರ್ ದಲಿತ ಗುತ್ತಿಗೆದಾರರ ಸಂಘ ದ ಅಧ್ಯಕ್ಷ ಫಕ್ಕೀರಪ್ಪ ಏಳಗುಡ್ಡ,ಉಪಾಧ್ಯಕ್ಷ ಮುದಕಪ್ಪ ಹಿರೇಮನಿ,ಐ ಬಿ ಚೌಧರಿ,ಬಿ ಬಂಗಾರಿ,ಮಂಜುನಾಥ ಬಿರಾದಾರ್,ಮಂಜುನಾಥ ಬಂಡಿವಡ್ಡರ್ ಉಪಸ್ಥಿತರಿದ್ದರು
Kshetra Samachara
29/10/2021 12:22 pm