ವರದಿ:ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಅಂದರೆ ಸಾಕು, ನಿಧಾನವೇ ಪ್ರಧಾನ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಇಲ್ಲೊಂದು ಕಾಮಾಗಾರಿ ಸಾಗುತ್ತಿದೆ. ಅಷ್ಟಕ್ಕೂ ಆ ಕಾಮಾಗಾರಿ ಯಾವುದೂ ಅನ್ನೋದನ್ನಾ ತೋರಸ್ತೇವಿ ನೋಡಿ!
ಹೀಗೆ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಕಾರವಾರ ರಸ್ತೆಯಲ್ಲಿನ ಕೆಂಪಗೇರಿಯ ಅಭಿವೃದ್ಧಿ ಕಾರ್ಯ. ಸರ್ಕಾರ ಕೋಟ್ಯಾಂತರ ರೂ. ಹಣ ಬಿಡುಗಡೆಗೊಳಿಸಿದ್ದರೂ ಕಾಮಗಾರಿ ಮಾತ್ರ ಈವರೆಗೆ ಪೂರ್ಣಗೊಂಡಿಲ್ಲ. ಇನ್ನು ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು, ಎಲ್ಲೆಂದರಲ್ಲಿ ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಈಗಾಗಲೆ ಕೆರೆಯ ಹೂಳು ತೆಗೆಯುವ ಕಾರ್ಯ ಮಾಡಲಾಗಿದ್ದು, ಜನರೇ ಹೇಳುವ ಪ್ರಕಾರ ಕೇವಲ ಕಾಟಾಚಾರಕ್ಕೆ ಕಾಮಗಾರಿ ಹಾಗೂ ನಿಧಾನವಾಗಿ ಕೆಲಸ ನಡೆಯುತ್ತಿದೆ ಎಂಬ ಆರೋಪಕ್ಕೆ ಪಾಲಿಕೆ ಆಯುಕ್ತರು ಉತ್ತರ ಹೀಗೆದೆ.
ಒಟ್ಟಿನಲ್ಲಿ ನಗರದ ಕೆರೆಗಳಲ್ಲಿ ಕೆಂಪಗೇರಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇನ್ನೂ ಕೆರೆಯ ಅಭಿವೃದ್ಧಿಗೆ ಸಧ್ಯ ಬಿಡುಗಡೆ ಮಾಡಿರುವ ಅನುದಾನ ಸಾಲುವುದಿಲ್ಲ ಎಂಬುದು ಅಧಿಕಾರಿಗಳ ಮಾತಾಗಿದ್ದು, ಕೂಡಲೆ ಸರಕಾರ ಅನುದಾನ ಬಿಡುಗಡೆ ಮಾಡಿ ಕೆರೆ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದೇ ಜನರ ಒತ್ತಾಯವಾಗಿದೆ.
Kshetra Samachara
12/10/2021 02:28 pm