ಹುಬ್ಬಳ್ಳಿ- ಹುಬ್ಬಳ್ಳಿ ಅಂದ್ರೆ ಸಾಕು ಎಲ್ಲರಿಗೂ ನೆನಪು ಆಗುವುದು ಕಿತ್ತೂರ ರಾಣಿ ಚನ್ನಮ್ಮ, ಈಗ ಅದೇ ಚನ್ನಮ್ಮ ಕತ್ತಲಲ್ಲೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು,,,, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೇವಲ ನಾಮಕಾವಸ್ಥೆವಾಗಿ ಒಂದೆ ದಿನಕ್ಕೆ ಸೀಮಿತವಾಗಿ ಲೈಟುಗಳನ್ನು ಹಾಕುವುದನ್ನು ನೋಡಿದ್ದೇವೆ. ಆದ್ರೆ ಉಳಿದ ದಿನದಲ್ಲಿ ಚನ್ನಮ್ಮ ಪುತ್ಥಳಿ ಕತ್ತಲಲ್ಲಿದ್ದು ಕಳೆಗುಂದುವ ಸ್ಥಿತಿ ಇಲ್ಲಿನದು. ಚನ್ನಮ್ಮ ಸರ್ಕಲ್ ಸುತ್ತ ಲೈಟ್ಗಳು ಇದ್ದರು ಯಾವುದೇ ಪ್ರಯೋಜನವಿಲ್ಲದಂತಾಗಿದೆ, ರಾತ್ರಿ ವೇಳೆ ಚನ್ನಮ್ಮ ಪುತ್ಥಳಿ ಬೆಳಕಿಲ್ಲದೆ ಕತ್ತಲಲ್ಲೆ ಇರುವಂತಹ ಪರಿಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಪಾಲಿಕೆ ಚನ್ನಮ್ಮನಿಗೆ ಲೈಟ್ ವ್ಯವಸ್ಥೆ ಮಾಡಿ ನೋಡುಗರಿಗೆ ಚನ್ನಮ್ಮ ಪುತ್ಥಳಿಯ ಸೌಂದರ್ಯ ಸವಿಯುವಂತೆ ಅನುಕೂಲ ಮಾಡಿಕೊಡಬೇಕಾಗಿದೆ.
Kshetra Samachara
08/10/2021 10:57 pm