ನವಲಗುಂದ : ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೊಳಚೆಯಿಂದ ಕೂಡಿದ ವಾತಾವರಣ ಇಲ್ಲಿ ಮನೆ ಮಾಡಿದ್ದು, ಈ ಬಗ್ಗೆ ಅದೆಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುವಂತೆ ಕಾಣುತ್ತಿಲ್ಲ, ಆದರೆ ಇದರಿಂದ ಸಮಸ್ಯೆಯನ್ನು ಎದುರಿಸುತ್ತಿರುವವರು ಮಾತ್ರ ಸಾರ್ವಜನಿಕರು...
ದಿನಕ್ಕೆ ಸಾವಿರಾರು ಜನರ ಸಂಚಾರ ಇರುವ ಸ್ಥಳ ಇದು, ಅಷ್ಟೇ ಅಲ್ಲ ಬಸ್ ಗಾಗಿ ಇದೆ ಸ್ಥಳದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಇದೇ ಕಸದ ಪಕ್ಕ ಕುಳಿತು ಕಾಯುತ್ತಾರೆ. ಇಂತಹ ಸ್ಥಳದಲ್ಲಿ ಕಸದ ರಾಶಿ ಅಷ್ಟೇ ಅಲ್ಲದೇ ಸಾರ್ವಜನಿಕರಿಂದ ಮೂತ್ರ ವಿಸರ್ಜನೆ ಬೇರೆ, ಸುಸರ್ಜಿತ ಶೌಚಾಲಯ ಇದ್ದರೂ ಸಹ ಇಲ್ಲೇ ಮೂತ್ರ ಮಾಡೋದು ಕೆಲವರಿಗೆ ರೂಡಿ ಆಗಿಬಿಟ್ಟಿದೆ ಏನೋ ಅನಿಸುತ್ತೆ, ಇಷ್ಟೇಕ್ಕೆಲ್ಲಾ ಕಾರಣ ಇಲ್ಲಿನ ನಿರ್ವಹಣೆಯ ಕೊರತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯವೇ ಸರಿ, ಇದಕ್ಕೆ ಕೂಡಲೇ ನವಲಗುಂದ ಡಿಪೋ ವ್ಯವಸ್ಥಾಪಕರು ಇತ್ತ ಗಮನಹರಿಸಿ, ಸಿಬ್ಬಂದಿ ನೇಮಿಸೋದಲ್ಲದೆ, ಪ್ರತಿ ದಿನವೂ ಸ್ವಚ್ಛತೆ ಮಾಡುವಲ್ಲಿ ಮುಂದಾಗಬೇಕಿದೆ.
Kshetra Samachara
23/09/2021 10:14 pm