ಕುಂದಗೋಳ : ಲೇಲೇ ಕಾರ್ ಬಂತ್ ತಡಿ, ಲೇ ಬೈಕನ್ಯಾಗ್ ಒಬ್ಬಾಂವ್ ಅದಾನ್ ಕೈ ಮಾಡ್, ಯಪ್ಪಾ ಒಟ್ ಸಂಶಿ ಮಟಾ ಬಿಡೋ, ಅಣ್ಣಾರ್ ಸಂಶಿ ಲಕ್ಷ್ಮೇಶ್ವರ ಹೊಕ್ಕಿರೇನ್ರಿ, ಯಾವ್ ಗಾಡಿ ಬಲವಲ್ವ ಟ್ರೇನಿಗೆ ಹೋಗುನಾ ಬಾ.
ಇಷ್ಟೇಲ್ಲಾ ಮಾತು ಎಲ್ಲಿವ್ ಅಂತಿರೇನು ? ಯಾವಾಗ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಬಿದೈತಿ ಅವಾಂಗಿದ ಈ ಸಂಶಿ ವಾಯಾ ಹೋಗೋ ಜನರ ನಿತ್ಯ ಗಾಡಿಗೆ ಕೈ ಹೊಡೋದು ಲಿಫ್ಟ್ ಕೇಳೋ ಪರಿಸ್ಥಿತಿ ಮಾತ್ ಅದಾವ್ರೀ ಇವು. ಬ್ರೀಡ್ಜ್ ಏನೋ ಬಿತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೊಳ್ಳಿ ಕಟ್ಟಾಕ್ ಚಾಲೂ ಮಾಡಿದ್ರೀ ಮತ್ತ್ ಈ ಶಾಲಿ, ಕಾಲೇಜು ವಿದ್ಯಾರ್ಥಿಗಳು ಮುದುಕ್ರು, ಅಂಗವಿಕಲರು ಹೇಂಗ್ ಪ್ರಯಾಣ ಮಾಡುದ್ರಿ ಪಾಪಾ ದಿನಾ ಇಲ್ನೋಡ್ರಿ ಹಿಂಗ್ ಗಾಡಿಗೆ ಕೈ ಮಾಡೋಕೋತ್ ಕಾಯೋ ದೌರ್ಭಾಗ್ಯ ಜನತೆಗೆ ಬಂದೈತಿ.
ಬಸ್ ಇಲ್ಲಾ ಖಾಸಗಿ ಬಾಡಿಗೆ ವಾಹನ ಇಲ್ಲಾ, ಎಲ್ಲಾ ಬಿಟ್ಟ್ ಟ್ರೇನ್ ಹೋದ್ರ ಎರೆಡು ಮೂರು ತಾಸಿಗೊಂದ ಟ್ರೇನ್ ಪಾಪಾ ವಿದ್ಯಾರ್ಥಿಗಳ ಪಾಡು ಕೇಳೋರ್ಯಾರು ? ಇದರ ನಡುವೆ ಅವಶ್ಯ ಕೆಲಸದ ನಿಮಿತ್ತ ಬರೋ ಜನಾ ಎರಡೆರಡು ತಾಸು ಕಾದು ಟ್ರೇನ್ ಹತ್ತಿ ಊರಿಗೆ ಹೊಂಟಾರು.
ಈ ಬಗ್ಗೆ ಸಂಶಿ ಸುತ್ತಲಿನ ಹತ್ತು ಹದಿನೈದು ಹಳ್ಳಿ ಜನಾ ಪೊಲೀಸರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏನೇ ಮನವಿ ಮಾಡಿದ್ರೂ ಪರಿಹಾರ ದೊರಕಿಲ್ಲ, ಮಾನ್ಯ ಜಿಲ್ಲಾಧಿಕಾರಿಗಳೇ ಹುಬ್ಬಳ್ಳಿ ಲಕ್ಷ್ಮೇಶ್ವರ ಬ್ರಿಡ್ಜ್ ಕಟ್ಟಸ್ರೀ ಅದರಂಗ ಪ್ರಮಾಣಕ್ಕೂ ಅನುಕೂಲ ಮಾಡಿ ಕೊಡ್ರೀ.
Kshetra Samachara
16/09/2021 09:07 pm