ಕಲಘಟಗಿ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಸಂಗ್ರಾಮ ಸೇನೆಯಿಂದ ಸರಕಾರಗಳ ಜನ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ಹನುಮಾನ್ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ,ಕೇಂದ್ರ,ರಾಜ್ಯ ಸೆಕಾರಗಳ ಕಾರ್ಮಿಕ, ಜನ ಹಾಗೂ ರೈತ ವಿರೋಧಿ ನೀತಿಯ ವಿರುದ್ಧ ಘೋಷಣೆ ಹಾಕಲಾಯಿತು.ದೇಶದಲ್ಲಿ ಕೈಗಾರಿಕಾ ರಂಗದ ಖಾಸಗೀಕರಣ ಮಾಡಿ ಕಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಯಿತು.
ಸಂಗ್ರಾಮ ಸೇನೆ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ,ಉಪನೊಂಣಿ ಕಚೇರಿಯಲ್ಲಿ ರೈತರ ಅಗತ್ಯ ಕೆಲಸಗಳನ್ನು ಮಾಡಲು ವಿಳಂಬ ಮಾಡಲಾಗುತ್ತಿದ್ದು,ಇದರಿಂದ ರೈತರು ಅಲೆಯುವಂತಾಗಿದೆ.ಕಚೇರಿಯಲ್ಲಿ
ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ.ಅಧಿಕಾರಿಗಳು ನೇರವಾಗಿ ರೈತರ ಕೆಲಸ ಮಾಡುವಂತೆ ಇಲ್ಲದೇ ಇದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ನಂತರ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರಗೆ ಮನವಿ ನೀಡಲಾಯಿತು.
ನಾಗರಾಜ ತೆಗಣ್ಣವರ,ಶಂಕರಗೌಡ ಭಾವಿಕಟ್ಟಿ,ಸೌಮ್ಯ ನಾಯಕಿ,ಶಿವಪ್ಪ ಲಮಾಣಿ,ಬಸವರಾಜ ಗಣೇಶಪ್ಪನವರ ಹಾಗೂ ರೈತರು ಉಪಸ್ಥಿತರಿದ್ದರು.
Kshetra Samachara
09/08/2021 07:47 pm