ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಎಲ್ಲರಿಗೂ ಶುದ್ಧ ಮತ್ತು ಸಮಾನ ನೀರಿನ ಯೋಜನೆ ಜಲ ಜೀವನ್ ಮಿಷನ್

ಕುಂದಗೋಳ : ನಿಮ್ಮ ಮನೆಗೆ ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಮಾನವಾಗಿ ಪೂರೈಕೆ ಆಗುತ್ತದೆ ಮತ್ತು ನೀರಿನ ಶುದ್ಧತೆ ನಿಮ್ಮ ಆರೋಗ್ಯ ನೈರ್ಮಲ್ಯಯುತ ಜೀವನಕ್ಕೆ ಸಹಕಾರಿಯಾಗುತ್ತದೆ ಪ್ರತಿ ಗ್ರಾಮಸ್ಥರು ಈ ಯೋಜನೆ ಪಡೆದುಕೊಳ್ಳಲು ಮುಂದೆ ಬರಬೇಕು ಗ್ರಾಪಂ ಅವರನ್ನು ಪ್ರೋತ್ಸಾಹಿಸಿ ಎಂದು ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಮಂಜುಳಾ ಹೇಳಿದರು.

ಅವರು ಕುಂದಗೋಳ ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಗ್ರಾಪಂ ಸದಸ್ಯ, ಪಿಡಿಓ, ನೀರಿನ ನೈರ್ಮಲ್ಯ ಸಿಬ್ಬಂದಿಗಳಿಗೆ ಒಂದು ದಿನದ ಜಲ ಜೀವನ ಮಿಷನ್ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜಲ ಜೀವನ್ ಮಿಷನ್ ಸೌಲಭ್ಯ ಎಲ್ಲರೂ ಪಡೆದು ಮೇಲೂ ಆಯಾ ಪಂಚಾಯಿತಿ ನಿರ್ವಹಣೆ ಜವಾಬ್ದಾರಿಯನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ, ಸಿಡಿಪಿಓ ಅನ್ನಪೂರ್ಣ ಸಂಗಳದ, ಸರ್ವ ಗ್ರಾಪಂ ಸದಸ್ಯ, ಪಿಡಿಓ, ಜಿಲ್ಲಾ ಪಂಚಾಯತ್ ಜಲ ಜೀವನ್ ಮಿಷನ್ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

04/08/2021 02:06 pm

Cinque Terre

21.81 K

Cinque Terre

0

ಸಂಬಂಧಿತ ಸುದ್ದಿ