ನವಲಗುಂದ : ತಾಲೂಕಿನ ಬೆಳವಟಗಿ ಗ್ರಾಮದ ಬಸ್ ತಂಗುದಾಣವನ್ನೊಮ್ಮೆ ನೋಡಿ, ಯಾವ ರೀತಿ ಕಸದಿಂದ ಕೂಡಿದೆ ಅಂತಾ, ಇಲ್ಲಿಗೆ ಬರುವ ಪ್ರಯಾಣಿಕರಿಗೆ ವಿಷ ಜಂತುಗಳ ಭಯ ಹೆಚ್ಚಾಗಿ ಕಾಡತೊಡಗಿದೆ.
ಗ್ರಾಮಗಳ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಅಲ್ಲಿನ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಹೇಳತೀರದ್ದಾಗಿ ಬಿಡುತ್ತೆ, ಈಗ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಜನರ ಪರಿಸ್ಥಿತಿ ಕೂಡ ಅದೇ ಆಗಿದೆ.
ಬಸ್ ತಂಗುದಾಣವೇನೋ ಇದೆ. ಆದರೆ ಅವ್ಯವಸ್ಥೆಯಿಂದ ಕೂಡಿದೆ. ಗಿಡಗಂಟೆಗಳು ಈ ರೀತಿ ಬೆಳೆದಿರೋದ್ರಿಂದ ಪ್ರಯಾಣಿಕರು ಇಲ್ಲಿ ಕೂರಲಾಗದ ಪರಿಸ್ಥಿತಿ ಬಂದೊದಗಿದೆ.
ಪುರುಷರೆನೊ ಇಲ್ಲಿ ಕೂರ ಬಹುದು, ಆದರೆ ಮಹಿಳೆಯರ ಪರಿಸ್ಥಿತಿ ಏನು..? ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ.
Kshetra Samachara
28/12/2020 05:10 pm