ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಾ.ಅಬ್ದುಲ್ ಕಲಾಂ ಹುಟ್ಟುಹಬ್ಬದ ಪ್ರಯುಕ್ತ ಅ.15 ರಂದು ಫುಟ್‌ಬಾಲ್‌ ಟೂರ್ನಮೆಂಟ್

ಹುಬ್ಬಳ್ಳಿ: ಭಗತಸಿಂಗ್ ಯೂಥ್ ಕ್ಲಬ್, ಕರ್ನಾಟಕ ಹಾಗೂ ಮಹಾವೀರ ಸೇವಾ ಸಂಘ ಹುಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ, ಫುಟ್ ಬಾಲ್ ಟೂರ್ನಮೆಂಟ್ ನ ಅಕ್ಟೋಬರ್ 15 ರಂದು ನಗರದ ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ ಎಂದು ಚಂದ್ರಶೇಖರ ಗೋಕಾಕ್ ಹೇಳಿದರು.

ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ಮಾನಸಿಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಲು ಪಂದ್ಯಾವಳಿ ಆಯೋಜಿಸಲಾಗಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ. ಲೀಗ್ ಹಾಗೂ ನಾಕ್ ಔಟ್ ಪದ್ಧತಿಯಲ್ಲಿ ಪಂದ್ಯಗಳು ನಡೆಯಲಿವೆ ಎಂದರು.

ಇನ್ನು ಪಂದ್ಯಾವಳಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ತೇಜಸ್ ಗೋಕಾಕ್ ವಹಿಸಲಿದ್ದಾರೆ. ಇವರ ಜೊತೆಗೆ ಮುಖಂಡರಾದ ಮಹಾವೀರ ಸಂಘದ ಅಧ್ಯಕ್ಷ ಸುರೇಶ ಜೈನ್, ಆರ್.ಎನ್.ರಿಚರ್ಡ್, ದೀಪಕ್ ಬಾಬು, ಚೈತನ್ಯ ಇನಾಮದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ಎಂದರು.

ಮಾಧ್ಯಮಗೋಷ್ಠಿಯಲ್ಲಿ ಸುರೇಶ ಜೈನ್, ತೇಜಸ್ ಗೋಕಾಕ್, ಆರ್.ಎನ್.ರಿಚರ್ಡ್, ದೀಪಕ್ ಬಾಬು, ಚೈತನ್ಯ ಇನಾಮದಾರ ಸೇರಿದಂತೆ ಮುಂತಾದವರು ಇದ್ದರು.

Edited By :
Kshetra Samachara

Kshetra Samachara

13/10/2022 08:32 pm

Cinque Terre

37.59 K

Cinque Terre

0

ಸಂಬಂಧಿತ ಸುದ್ದಿ