ಧಾರವಾಡ: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಹುದ್ದೆ ಪದನಾಮ ಬದಲಾವಣೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಕಾವು ಪಡೆದುಕೊಂಡಿದೆ.
ಗುರುವಾರ ಧಾರವಾಡದಲ್ಲಿ ಸುರಿದ ಧಾರಾಕಾರ ಮಳೆಯನ್ನೂ ಲೆಕ್ಕಿಸದ ಉಪನ್ಯಾಸಕರು ಮಳೆಯಲ್ಲೇ ಕವಿವಿ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕವಿವಿಯ ವ್ಯಾಪ್ತಿಗೆ ಬರುವ 600ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಯುಜಿಸಿ ನಿಯಮಾವಳಿಯ ಪ್ರಕಾರ ವೇತನ ಹೆಚ್ಚಿಸುವಂತೆ ವಿಶ್ವವಿದ್ಯಾಲಯ ಹಾಗೂ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಉಪನ್ಯಾಸಕರು ಧರಣಿಗೆ ಮುಂದಾಗಿದ್ದಾರೆ.
ಗುರುವಾರವೂ ಧರಣಿ ಮುಂದುವರೆದಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಸುರಿಯಲಾರಂಭಿಸಿತು. ಆದರೆ, ಮಳೆಯನ್ನೂ ಲೆಕ್ಕಿಸದ ಉಪನ್ಯಾಸಕರು ಆಡಳಿತ ಭವನದ ಮುಂದೆ ಸುರಿಯುವ ಮಳೆಯಲ್ಲೇ ನಿಂತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2022 06:50 pm