ಹುಬ್ಬಳ್ಳಿ : ಇಲ್ಲೊಂದು ದಾರಿ ಆ ದಾರಿಯಲ್ಲಿ ಓಡಾಡುವ ರೈತರ ಕಷ್ಟಕ್ಕೆ ಲೋಕೋಪಯೋಗಿ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆನೆ ಕೆಡಿಸಿಕೊಂಡಿಲ್ಲಾ ನೋಡಿ.
ಈ ಪರಿಣಾಮ ಹಳ್ಯಾಳ ಅದರಗುಂಚಿ ರಸ್ತೆ ಈಗ ಕಲುಷಿತ ರಾಡಿ ನೀರು ತುಂಬಿ ಸಂಪೂರ್ಣ ಹಾಳಾಗಿ ಹೋಗಿದೆ, ಇದಲ್ಲದೆ ರಸ್ತೆ ನಡುವಿನ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡ ಕಾರಣ ಟ್ರ್ಯಾಕ್ಟರ್ ಎತ್ತು ಚಕ್ಕಡಿ ಓಡಾಟವೇ ಕಷ್ಟವಾಗಿದೆ.
ವಿಪರ್ಯಾಸ ಎನಂದ್ರೇ, ಇಂತಹ ಹಾಳಾದ ರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಇಲಾಖೆ ನಿರ್ಮಿಸಿರುವ ಒಳ ಸೇತುವೆಯಲ್ಲಿ ನೀರು ಸಂಗ್ರಹವಾಗಿ ಅಕ್ಷರಶಃ ಕೆರೆಯಂತಾಗಿದೆ. ಬ್ರಿಡ್ಜ್ ನಿರ್ಮಿಸಿದ ರೈಲ್ವೆ ಇಲಾಖೆ ಸಂಗ್ರಹವಾದ ನೀರು ಹೊರ ಹಾಕುವುದನ್ನು ಮರೆತು ಈ ರೀತಿ ನೀರು ಸಂಗ್ರಹವಾದಲ್ಲಿ ಕರೆ ಮಾಡಿ ಎಂದು ಪೋನ್ ನಂಬರ್ ನೀಡಿದೆ.
ಆದ್ರೇ, ಈ ನಂಬರಿಗೆ ಕರೆ ಮಾಡಿದ್ರೇ ಆ ಕಡೆಯಿಂದ ಹಿಂದಿಯಲ್ಲಿ ಮಾತನಾಡುವ ಅಧಿಕಾರಿ ಉಡಾಫೆ ಉತ್ತರ ನೀಡ್ತಾ ಇದ್ದಾರೆ ಎಂಬುದು ರೈತರ ಆರೋಪವಾಗಿದೆ.
ಈ ಬಗ್ಗೆ ಗಮನಿಸಬೇಕಾದ ಸಚಿವ ಹಳ್ಯಾಳ ಗ್ರಾಮದ ಜನಪ್ರತಿನಿಧಿ ಶಂಕರ ಪಾಟೀಲ ಮುನೇನಕೊಪ್ಪ ಸುಮ್ಮನಿದ್ದಾರೆ. ರೈತಾಪಿ ಜನರ ಓಡಾಟದ ರಸ್ತೆ ಅತಿವೃಷ್ಟಿ ಪರಿಣಾಮ ದಿನೇ ದಿನೇ ಹಾಳಾಗಿ ಚರಂಡಿ ಅವತಾರ ತಾಳುತ್ತಿದ್ದು ಅರಣ್ಯ ಇಲಾಖೆ ನೆಟ್ಟ ಸಸಿಗಳು ಒಣಗಿ ಹೋಗುತ್ತಿವೆ.
Kshetra Samachara
04/10/2022 06:59 pm