ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಕುಂದಗೋಳ : ಆಧುನಿಕ ಜಗತ್ತು ಮುಂದುವರಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಈ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಕಾರಣದಿಂದ ಜನ ಸಂಚಾರ ಸಾರಿಗೆ ಬಸ್ ಸಂಚಾರಕ್ಕೆ ಉಂಟಾಗುವ ತೊಂದರೆಗಳ ಬಗ್ಗೆ ಈ ಹಿಂದೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ "ಕುಂದಗೋಳದಲ್ಲಿ ಎಲ್ಲೇಂದರಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್" ಎಂಬ ಶಿರ್ಷಿಕೆ ಅಡಿಯಲ್ಲಿ ಸುದ್ಧಿ ಬಿತ್ತರಿಸಿತ್ತು.
ಇದೀಗ ಕುಂದಗೋಳ ಪಟ್ಟಣದ ವರ್ತಕರ ಮಂಡಳಿ ಸಹ ಈ ಬಗ್ಗೆ ಪೊಲೀಸರಿಗೆ ಮನವಿ ಮಾಡಿದ್ದು ಸದ್ಯ ಅಡ್ಡಾದಿಡ್ಡಿ ಮಾಯವಾಗಿ ಜನ ಮತ್ತು ಸಾರಿಗೆ ಸಂಚಾರಕ್ಕೆ ಪುಟಪಾತ್ ರಸ್ತೆ ತೆರೆದಿದೆ.
ಹೌದು ! ಕುಂದಗೋಳ ಪಟ್ಟಣದ ಗಾಳಿ ಮರೇಮ್ಮದೇವಿ ದೇವಸ್ಥಾನದಿಂದ ಮಾರ್ಕೇಟ್ ರಸ್ತೆ ಕೊನೆವರೆಗೂ ನಿತ್ಯ ಬೆಳಿಗ್ಗೆ ಪೊಲೀಸರು ಅಡ್ಡಾ ದಿಡ್ಡಿ ವಾಹನ ಪಾರ್ಕಿಂಗ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದು ರಸ್ತೆಯ ಒಂದೇ ಬದಿಯಲ್ಲಿ ಸಾಲಾಗಿ ವಾಹನ ನಿಲ್ಲಿಸುವ ನಿಯಮ ಜಾರಿಗೆ ತಂದಿದ್ದಾರೆ.
ಕುಂದಗೋಳ ಪಟ್ಟಣದ ಮುಖ್ಯರಸ್ತೆ ಬ್ಯಾಂಕ್, ಹಾಸ್ಪಿಟಲ್, ದಿನಸಿ ಅಂಗಡಿ, ಹೊಟೇಲ್ ಸೇರಿದಂತೆ ವಿವಿಧ ಮಳಿಗೆಗಳ ಮುಂದೆ ಸಟಕ್ಕನೆ ವಾಹನ ಪಾರ್ಕ್ ಮಾಡುವವರಿಗೆ ಪೊಲೀಸರು ಕ್ಲಾಸ್ ನಡೆಸಿದ್ದು ಜನ ಸಂಚಾರ ಸುಗಮವಾಗಿ ಟ್ರಾಫಿಕ್ ಕಿರಿ ಕಿರಿ ಕಡಿಮೆಯಾಗುತ್ತಿದೆ.
Kshetra Samachara
10/11/2020 12:54 pm