ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಥಳೀಯರಿಂದಲೇ ಸ್ವಚ್ಚವಾಯ್ತು ಪರಿಸರ: ಮೂವತ್ತು ವರ್ಷದ ಸಮಸ್ಯೆಗೆ ಬಿತ್ತು ಬ್ರೇಕ್...!

ಹುಬ್ಬಳ್ಳಿ: ಅದು ಹೆಸರಿಗೆ ಮಾತ್ರ ರಾಮನಗರ. ಆದರೆ ಅಲ್ಲಿನ ಸಮಸ್ಯೆ ನೋಡಿದರೇ ನಿಜಕ್ಕೂ ಜನರು ನರಕಯಾತನೆ ಅನುಭವಿಸಬೇಕಿತ್ತು. ಅದೆಷ್ಟೋ ಬಾರಿ ಇಲ್ಲಿನ ಜನರು ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಈಗ ಇಲ್ಲಿನ ನಿವಾಸಿಗಳೇ ಎಚ್ಚೇತ್ತುಕೊಂಡ ಹೊಸ ನಿರ್ಧಾರಕ್ಕೆ ಬಂದಿದ್ದು, ಈಗ ರಾಮನಗರಕ್ಕೆ ಹೊಸ ಕಳೆ ಬಂದಿದೆ.

ಹೌದು..ಎಲ್ಲೆಂದರಲ್ಲಿ ಕಸ, ನಿರ್ವಹಣೆಯಾಗದೇ ಉಳಿದಿದ್ದ ಘನ ತ್ಯಾಜ್ಯ, ಸರಿಯಾಗಿ ಹರಿದು ಹೋಗಲು ಸ್ಥಳಾವಕಾಶ ಇಲ್ಲದೇ ಉಳಿದಿದ್ದ ಚರಂಡಿ ನೀರಿನಿಂದ ಇಲ್ಲಿನ ಜನರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಅಲ್ಲದೆ ರಾಮನಗರದ ಸಮಸ್ಯೆ ಕುರಿತು ಸಾಕಷ್ಟು ಬಾರಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಕೂಡ ಮಾಡಿತ್ತು. ಈಗ ಇಲ್ಲಿನ ನಿವಾಸಿಗಳೇ ಸ್ವಯಂ ಪ್ರೇರಿತರಾಗಿ ಸಂತೋಷ ಚಲವಾದಿ ನೇತೃತ್ವದಲ್ಲಿ ಜೆಸಿಬಿ ಮೂಲಕ ಸ್ವಚ್ಚಗೊಳಿಸಿ ಇಲ್ಲಿನ ಆಸ್ಪತ್ರೆಯ ಕಾಂಪೌಂಡ್ ಗಳಿಗೆ ಸುಣ್ಣ ಹಾಗೂ ಬಣ್ಣ ಹಚ್ಚಿಸುವ ಮೂಲಕ ರಾಮನಗರದ ಸ್ವಚ್ಚತೆಗೆ ಕೈ ಜೋಡಿಸಿದ್ದು, ಮೂವತ್ತು ವರ್ಷಗಳಿಂದ ಅನುಭವಿಸುತ್ತಿದ್ದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಂತಾಗಿದೆ.

ಇನ್ನೂ ಇಲ್ಲಿನ ಸಮಸ್ಯೆ ನಿಜಕ್ಕೂ ಪುರಾತನ ಸಮಸ್ಯೆಯೇ ಆಗಿತ್ತು. ಇಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಯಾವುದೇ ಪಾಲಿಕೆಯ ಸಹಾಯವಿಲ್ಲದೆ ಇಲ್ಲಿನ ಜನರೇ ಸ್ವಯಂ ಪ್ರೇರಿತರಾಗಿ ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ದು, ನಿಜಕ್ಕೂ ವಿಶೇಷವಾಗಿದೆ.

ಒಟ್ಟಿನಲ್ಲಿ ಅಧಿಕಾರಿಗಳ ಹುಸಿ ಆಶ್ವಾಸನೆಗೆ ಬೇಸತ್ತ ಜನರು ತಮ್ಮ ಖರ್ಚಿನಲ್ಲಿ ತಮ್ಮ ವಠಾರವನ್ನು ಸ್ವಚ್ಚವನ್ನಾಗಿ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Edited By : Somashekar
Kshetra Samachara

Kshetra Samachara

26/05/2022 04:30 pm

Cinque Terre

28.03 K

Cinque Terre

5

ಸಂಬಂಧಿತ ಸುದ್ದಿ