ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎ.23 ರಿಂದ 25ರವರೆಗೆ 'ಆಯುರ್ ಎಕ್ಸ್‌ಪೋ'

ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸವೇಶ್ವರನಗರದಲ್ಲಿರುವ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಇದೇ ಎಪ್ರಿಲ್ 23ರಿಂದ 25ರವರೆಗೆ 'ಆಯುರ್ ಎಕ್ಸಪೋ- 2022' ಎಂಬ ಆಯುರ್ವೇದದ ಬೃಹತ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಆಚರಣೆ ಅಂಗವಾಗಿ ಹಾಗೂ ಸಂಜೀವಿನಿ ಆಯುರ್ವೇದ ಆಸ್ಪತ್ರೆ ಸ್ಥಾಪನೆಗೊಂಡ ಸವಿನೆನಪಿಗಾಗಿ ಹಮ್ಮಿಕೊಂಡಿರುವ ಈ ಪ್ರದರ್ಶನದಲ್ಲಿ ಆಯುರ್ವೇದ ವೈದ್ಯಶಾಸ್ತ್ರದ ಸಂಪೂರ್ಣ ಮಾಹಿತಿ ಹಾಗೂ ಚಿಕಿತ್ಸಾ ವಿಧಾನಗಳನ್ನೊಳಗೊಂಡ ಭಿತ್ತಿ ಫಲಕ ಮತ್ತು ವೈದ್ಯಕೀಯ ಪರಿಕರಗಳ ಮುಖಾಂತರ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಚಿಕಿತ್ಸಕರಿಗೆ ಜ್ಞಾನವನ್ನು ನೀಡಲಾಗುವುದು.

ಅತ್ಯಂತ ಪುರಾತನ ವೈದ್ಯಶಾಸ್ತ್ರವಾದ ಆಯುರ್ವೇದ ವೈದ್ಯ ಪದ್ಧತಿಯ ಇತಿಹಾಸ ಅದರ ಬೆಳವಣಿಗೆ, ಆಯುರ್ವೇದದ ಮೂಲ ಸಿದ್ಧಾಂತಗಳು, ರೋಗ ಪರೀಕ್ಷಾ ವಿಧಾನಗಳು ಮತ್ತು ಸಾಧಾರಣ ಮತ್ತು ಅಸಾಧಾರಣ ರೋಗಗಳ ಆಯುರ್ವೇದ ಚಿಕಿತ್ಸೆಯನ್ನು ಪ್ರತಿಪಾದಿಸುವ ಮಾಹಿತಿ ನೀಡಲಾಗುವುದು. ರೋಗ ಬರದ ಹಾಗೆ ತಡೆಗಟ್ಟುವ ಆಹಾರ ಪದ್ಧತಿ, ದಿನನಿತ್ಯ ಮತ್ತು ಋತು ಅನುಸಾರ ಪಾಲಿಸಬೇಕಾದ ನಿಯಮಗಳ ಬಗೆಗೆ ಆರವತ್ತು ಮಳಿಗೆಗಳಲ್ಲಿ ಮಾಹಿತಿ ಇದೆ. ಪ್ರಕೃತಿ ಚಿಕಿತ್ಸಾ ಯೋಗ ಮತ್ತು ಧ್ಯಾನದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನ ಮತ್ತು ವಿವಿಧ ರೋಗಗಳಿಗೆ ಔಷಧಿ ಇಲ್ಲದೇ ನೀಡಬಹುದಾದ ಚಿಕಿತ್ಸೆಯ ಮಾಹಿತಿ ಇದೆ. ದಿನನಿತ್ಯ ಮನೆ ಮದ್ದು ರೂಪದಲ್ಲಿ ಉಪಯೋಗಿಸಬಹುದಾದ ಸುಮಾರು ಆರುವತ್ತು ಔಷಧಿ

ಸಸ್ಯಗಳ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿದೆ. ಆಯುರ್ವೇದ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಆಧುನಿಕ ಸಂಶೋಧನೆಯಿಂದ ದೃಢೀಕರಿಸಿದ ಮಾಹಿತಿಯನ್ನು ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡುತ್ತಿರುವ ವಿವಿಧ ವೈದ್ಯಕೀಯ ಸಂಸ್ಥೆಗಳ ಪರಿಚಯವನ್ನು ಕೂಡ ಸಾದರ ಪಡಿಸಲಾಗುವುದು. ಆಯುರ್ವೇದ ಚಿಕಿತ್ಸಾ ವಿಧಾನಕ್ಕೆ ಪೂರಕವಾಗಿರುವ ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ

ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿದೆ. ಉಪಕರಣಗಳ ಹಾಗೂ ಆಯುರ್ವೇದ ಪುಸ್ತಕಗಳ ಮೂರು ದಿನಗಳವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಪ್ರತಿ ದಿನ ಇಬ್ಬರಂತೆ ಆರು ಸಂಪನ್ಮೂಲ ವೈದ್ಯರಾದ ಸಂತೋಷ ಭಾರತಿ ಗೂರುಜಿ, ತನ್ಮಯ ಗೋಸ್ವಾಮಿ, ಗಿರಿಧರ ಖಜೆ, ವಿಜಯಲಕ್ಷ್ಮಿ, ಬಾಳೇಕುಂದ್ರಿ, ವೆಂಕಟರಮಣ ಹೆಗಡೆ ಹಾಗೂ ಶ್ರೀ ಶ್ರೀ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ, ತಮ್ಮ ಅನುಭವವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಸಾರ್ವಜನಿಕರಿಗೆ ಯೋಗಾಸನಗಳ ಪ್ರತ್ಯಕ್ಷ ಪ್ರದರ್ಶನ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಆರೋಗ್ಯವಂತ ಶಿಶು ಸ್ಪರ್ಧೆಯನ್ನು ನಡೆಸಿಕೊಡಲಾಗುವುದು. ಪ್ರತಿನಿತ್ಯ ಸಾರ್ವಜನಿಕರಿಗೆ ಮನೋರಂಜನೆಗಾಗಿ ಭಾರತೀಯ ಸಂಸ್ಕೃತಿ ಹಾಗೂ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಇದೆ.

ಪ್ರದರ್ಶನ ವೇಳೆಯಲ್ಲಿ ಮೂರು ದಿನಗಳವರೆಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿಕೊಡಲಾಗುವುದು, ಆಯುರ್ವೇದ ಪದ್ಧತಿಯಿಂದ ನಾಡೀತರಂಗಿಣಿ ಯಂತ್ರದಿಂದ ನಾಡಿ ಪರೀಕ್ಷೆ ಹಾಗೂ ಪ್ರಕೃತಿ ಪರೀಕ್ಷೆಯನ್ನು ನಡೆಸಿಕೊಡಲಾಗುವುದು. ಆಯುರ್ವೇದ ಜ್ಞಾನ ಮತ್ತು ಅನುಭವಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ಏರ್ಪಡಿಸಿರುವ ಈ ಪ್ರದರ್ಶನದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವೈದ್ಯರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕೆಂದು ಕೋರಲಾಗಿದೆ.

Edited By :
Kshetra Samachara

Kshetra Samachara

20/04/2022 09:12 pm

Cinque Terre

22.82 K

Cinque Terre

0

ಸಂಬಂಧಿತ ಸುದ್ದಿ