ಕುಂದಗೋಳ : ನಮಸ್ಕಾರಿ ರೀ ಕುಂದಗೋಳ ಮಂದಿಗ ಏನ್ರೀ ನಿಮ್ಮೂರಾಗಿನ್ ಪಶು ಆಸ್ಪತ್ರೆ ಕಟ್ಟಡದ್ದ ದಿನಕ್ಕೊಂದು ಕಥೆ ಚಾಲು ಆಗೇತಿ ಅಲ್ರೀ ಪಾ.
ಹೌದು ರೀ ! ಮೊದಲ ಕಟ್ಟಡ ಬೇಕಾಗಿತ್ತು ರೆಡಿ ಆತು, ಆ ಮ್ಯಾಲ್ ಆ ಕಟ್ಟಡ ಉದ್ಘಾಟನೆ ಆಗಬೇಕಿತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಹೇಬ್ರು ಉದ್ಘಾಟನೆನೂ ಮಾಡಿದ್ರೂ, ಈಗ ಎನ್ ಪಾ ಕಥಿ ಅಂದ್ರ ? ಆ ಕಟ್ಟಡ ಬಳಕೆಗೆ ಬೇಕಾಗೇತಿ ನೋಡ್ರಿ.
ಜೋಶಿ ಸಾಹೇಬ್ರು ಕಟ್ಟಡ ಉದ್ಘಾಟನೆ ಮಾಡಿ ಮ್ಯಾಲ ಕದ ಮುಚ್ಚಿದ ಪಶು ಆಸ್ಪತ್ರೆ ತಿಂಗಳ್ ಕಳ್ಯಾಕ್ ಬಂದ್ರು ಬಾಗಲ ತಗದಿಲ್ಲಾ ಮತ್ತ್ ಉಪಯೋಗಕ್ಕೆ ಇಲ್ಲಾ ಯಾಕ್ ಉಪಯೋಗಕ್ಕ ಕೊಟ್ಟಿಲ್ಲಾ ಅನ್ನೋದು ಮಂದಿ ಪ್ರಶ್ನೇ ?
ಆ ಮ್ಯಾಲ್ ಪಶು ಆಸ್ಪತ್ರೆ ನೂತನ ಕಟ್ಟಡ ಸುತ್ತ ದನಾ ಕರಾ ತಗೋಂಡು ಹೋದ್ರ ಹುಷಾರ್ ರೀ ಪಾ, ನೋಡ್ರಿಲ್ಲೇ ಹಿಂಗ್ ಎಲ್ಲೇ ಬೇಕ್ ಅಲ್ಲೇ ಸೂಜಿ, ಸಲಾಯನ್ ಔಷಧಿ ಬಾಟಲಿ ಗ್ಲಾಸ್ ಬಿದ್ದಾವ್ ಮತ್ತ್ ಒಂದು ಹೆಗ್ಗಣ ಸತ್ತ ಗೊಮ್ಮ ನಾರಿದ್ರೂ 77 ಲಕ್ಷ ವೆಚ್ಚದ ಆಸ್ಪತ್ರೆ ಸುತ್ತಲೂ ಸ್ವಚ್ಚತೆ ಅನ್ನೋದೆ ಇಲ್ಲಾ.
ಈ ಹಳೇ ಪಶು ಆಸ್ಪತ್ರೆ ಕಟ್ಟಿಗೆ ಪಿಠೋಪಕರಣ, ಹೊದಿಕೆಗಳು ಹರಾಜು ಇಲ್ಲದೆ ನೋಡ್ರಿಲ್ಲೇ ಹಿಂಗ್ ಇಟ್ಟಲ್ಲೇ ಹಾಳಾಗಿ ಹೊಂಟಾವ್ ಯಪ್ಪಾ ಅಧಿಕಾರಿಗಳೇ ದಯವಿಟ್ಟು ಗಮನಿಸ್ರೀ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
31/03/2022 07:51 pm