ಕುಂದಗೋಳ: ತಾಲೂಕಿನ ಗುಡಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ತನ್ನ ಸಿಬ್ಬಂದಿ ಬರ ನೀಗಿಸಿಕೊಳ್ಳಲಾಗದೆ, ಇತ್ತ ಆಸ್ಪತ್ರೆ ಶುಚಿತ್ವ ಕಾಪಾಡಿಕೊಳ್ಳಲಾಗದೆ ಅತ್ತ ಮೇಲಾಧಿಕಾರಿಗಳ ಚಿತ್ತಕ್ಕೆ ಅವ್ಯವಸ್ಥೆ ತರಲಾಗದೆ ಹೇಗೋ ಕರ್ತವ್ಯ ನಿರ್ವಹಿಸುತ್ತಿದೆ!
ಹೌದು... ನಿತ್ಯ 100- 200 ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯಲ್ಲಿ ಒಂದು ಎಲ್.ಎಚ್.ವಿ, ಒಂದು ಕ್ಲರ್ಕ್, ಒಂದು ಎಫ್ ಡಿಸಿ ಹುದ್ದೆ ಖಾಲಿ ಇದ್ದು, ರೋಗಿಗಳಿಗೆ ಸೂಕ್ತ ಸ್ಪಂದನೆ ಕೊರತೆ ಎದುರಾಗಿದೆ.
ಈ ನಡುವೆ ಕಳೆದ ಒಂದು ವರ್ಷದಿಂದ ಗುಡಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಆಗಮಿಸಿದ ಡಾ.ಗುರುರಾಜ್ ಸಕಲಾತಿ ಅವರು ಆಸ್ಪತ್ರೆಯಲ್ಲಿನ ಹೆರಿಗೆ ಸಂಖ್ಯೆ ಹೆಚ್ಚಿಸಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ, ಆಸ್ಪತ್ರೆ ಗುಣಮಟ್ಟ ಸುಧಾರಿಸಿದ್ದರೂ ಸಿಬ್ಬಂದಿ ಕೊರತೆ, ಅನೈರ್ಮಲ್ಯ ಹಾಗೇ ಉಳಿದಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಆಸ್ಪತ್ರೆಯ ಸಮಸ್ಯೆಗೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ವರದಿ: ಶ್ರೀಧರ ಪೂಜಾರ ʼಪಬ್ಲಿಕ್ ನೆಕ್ಸ್ಟ್ʼ ಕುಂದಗೋಳ
Kshetra Samachara
22/06/2022 06:20 pm