ಕಲಘಟಗಿ: ತಾಲೂಕಿನ ಕಲಕೇರಿಯಿಂದ ಹೊನ್ನಾಪುರ, ಮನಗುಂಡಿಯಿಂದ ಯರಿಕೊಪ್ಪ, ಪಡುಬುದ್ರಿ-ಚಿಕ್ಕಾಲಗುಡ್ಡ ರಾಜ್ಯ ಹೆದ್ದಾರಿ ನೀರಸಾಗರ ಕ್ರಾಸ್, ಮಡಕಿಹೊನ್ನಳ್ಳಿ-ರಾಮನಾಳ-ವಾಯಾ ಸಂಗೇದೇವರಕೊಪ್ಪ ಗ್ರಾಮಗಳ ಒಟ್ಟು 17 ಕೋಟಿ ವೆಚ್ಚದ ರಸ್ತೆ ಭೂಮಿ ಪೂಜೆಯನ್ನು ಮಾನ್ಯ ಶಾಸಕರಾದ ಶ್ರೀ ಸಿ.ಎಮ್. ನಿಂಬಣ್ಣವರ ಮತ್ತು ಬಿಜೆಪಿ ಯುವ ಮುಖಂಡರಾದ ಶ್ರೀ ಶಶಿಧರ ನಿಂಬಣ್ಣವರ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಲಕೇರಿ ಗ್ರಾಮದ ಗ್ರಾ.ಪಂ. ಅಧ್ಯಕ್ಷರಾದ ಶ್ರೀ ಸುನೀಲ ದುರಗಾಯಿ, ಮಾರುತಿ ಬಾಂಗಡಿ, ಹಾಗೂ ಮನಗುಂಡಿ ಗ್ರಾಮದ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ನೀಲವ್ವ ಕೊಳವಿ, ಪುಂಡಲೀಕ ಜಕ್ಕನ್ನವರ, ಯಲ್ಲಪ್ಪ ಹುತ್ತಕ್ಕನವರ, ಮತ್ತು ದುಮ್ಮವಾಡ ಗ್ರಾ.ಪಂ. ಅಧ್ಯಕ್ಷರಾದ ಗುರುನಾಥ ಬೆಟಗೇರಿ,
ಸಂತೋಷ ಮಾದನಬಾವಿ, ಸುರೇಶ ಮಂಜರಗಿ, ಜಯಪಾಲ ಬೆಟದೂರ, ನಿಂಗಪ್ಪ ಆಸಮಟ್ಟಿ, ಅಜ್ಜಪ್ಪ ಬ್ಯಾಹಟ್ಟಿ ಹಾಗೂ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಲಿಂಗರಾಜ ತಿರ್ಲಾಪುರ, ನಿಂಗಪ್ಪ ಸುತಗಟ್ಟಿ, ಮಲ್ಲೇಶಪ್ಪ ಜಾವೂರ, ಶಿವಕಲ್ಲಪ್ಪ ಕುಬ್ಯಾಳ ಶ್ರೀಮತಿ ವಿಜಯಲಕ್ಷ್ಮೀ ಆಡಿನವರ, ಗ್ರಾ.ಪಂ. ಪಿ.ಡಿ.ಓ. ಶಂಭುಲಿಂಗ ಹೊಸಮನಿ ಬಸವರಾಜ ಹೊಸಮನಿ, ಪರಶರುರಾಮ ಹುಲಿಹೊಂಡ ಮತ್ತು ಎಲ್ಲ ಗ್ರಾಮಗಳ ಹಿರಿಯರು ಮತ್ತು ಯುವಕರು ಹಾಗೂ ಸಂಬಂಧಪಟ್ಟ ಇಂಜನಿಯರ್‌ಗಳು ಪಾಲ್ಗೊಂಡಿದ್ದರು.
Kshetra Samachara
07/10/2022 09:32 am