ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ-2022 ಸಮೀಕ್ಷೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 1 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಇರುವ ದೇಶದ 382 ನಗರಗಳ ಪೈಕಿ 61ನೇ ಸ್ಥಾನ ಪಡೆದಿದೆ. ರಾಜ್ಯದ 25 ನಗರಗಳ ಪೈಕಿ ಎರಡನೇ ಸ್ಥಾನ ಪಡೆದಿದ್ದು, ಮಹತ್ವದ ಗೌರವದ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಹೌದು.. ಸ್ವಚ್ಛ ಸರ್ವೇಕ್ಷಣ-2022ರಲ್ಲಿ ಹತ್ತು ಲಕ್ಷ ಜನಸಂಖ್ಯೆ ಇರುವ 382 ನಗರಗಳು ಭಾಗವಹಿಸಿದ್ದವು. ಒಟ್ಟಾರೆ ಸಮೀಕ್ಷೆಯಲ್ಲಿ ದೇಶದ 4,354 ನಗರಗಳು ಭಾಗವಹಿಸಿದ್ದವು. ಈ ನಿಟ್ಟಿನಲ್ಲಿ ಹು-ಧಾ ಮಹಾನಗರ ಪಾಲಿಕೆ ರಾಜ್ಯದ ಎರಡನೇ ನಗರವಾಗಿ ಹೊರಹೊಮ್ಮಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ 2021ನೇ ಸಾಲಿಗಿಂತ ಉತ್ತಮ ರ್ಯಾಂ ಕಿಂಗ್ ಗಳಿಸಿದೆ. ಕಳೆದ ವರ್ಷ ಪಾಲಿಕೆಯು ಹತ್ತು ಲಕ್ಷದ ಒಳಗಿನ ಜನಸಂಖ್ಯೆಯ ನಗರಗಳ ಸಾಲಿನಲ್ಲಿ 85ನೇ ಸ್ಥಾನ ಗಳಿಸಿತ್ತು.
ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಉತ್ತಮ ರ್ಯಾಂ ಕ್ ಗಳಿಸಿದೆ. ಆದರೆ, ಸುಧಾರಣೆಗೆ ಇನ್ನಷ್ಟು ಅವಕಾಶಗಳಿದ್ದು, ಇದಕ್ಕೆ ನಗರದ ಜನ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಉಗುಳುವುದು, ಕಸ ಎಸೆಯುವುದು ಹಾಗೂ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಸಮರ್ಪಕವಾಗಿ ಆಗದ ಕಾರಣ ರ್ಯಾಂ ಕಿಂಗ್ ಮೇಲೆ ಪರಿಣಾಮ ಬೀರಿದೆ ಎಂದು ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
Kshetra Samachara
03/10/2022 01:26 pm