ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳಾ ಸಿಬ್ಬಂದಿಗೆ ಸಂಚಾರಿ ಶೌಚಾಲಯ; "ಸ್ವಚ್ಛತೆಗೆ ಆದ್ಯತೆ" ಚಿಗರಿ ಆಶಯ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಮಧ್ಯದಲ್ಲಿ ತ್ವರಿತ ಸಾರಿಗೆ ಸೇವೆಯನ್ನು ಒದಗಿಸುತ್ತಿರುವ ಬಿ.ಆರ್.ಟಿ.ಎಸ್. ಮಹಿಳಾ ಸಿಬ್ಬಂದಿಗಾಗಿ ವಿಶೇಷ ನಿರ್ಧಾರವನ್ನು ಕೈಗೊಂಡಿದೆ. ಹು-ಧಾ ನಗರ ಮಧ್ಯದಲ್ಲಿರುವ ಟರ್ಮಿನಲ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಸಂಚಾರಿ ಶೌಚಾಲಯ ಬಸ್ ಓಡಿಸಲು ಮುಂದಾಗಿದೆ.

ಹೌದು... ಈಗಾಗಲೇ ಬಹುತೇಕ ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿ ಟಿಕೆಟ್ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದು, ಈ ನಿಟ್ಟಿನಲ್ಲಿ ಸಂಚಾರಿ ಶೌಚಾಲಯದ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ.

ಈಗಾಗಲೇ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಿ.ಆರ್.ಟಿ.ಎಸ್ ಯೋಜನೆ ಈಗ ಮಹಿಳಾ ಸಿಬ್ಬಂದಿಗಾಗಿ ಇಂತಹದೊಂದು ನಿರ್ಧಾರಕ್ಕೆ ಮನಮಾಡಿದೆ. ಈಗಾಗಲೇ ಪ್ರಾಯೋಗಿಕ ಕಾರ್ಯಾಚರಣೆ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹೈ ಟೆಕ್ನಾಲಜಿ ಬಸ್ ಮೂಲಕ ಮತ್ತಷ್ಟು ಅನುಕೂಲತೆಗೆ ನಿರ್ಧರಿಸಿದೆ.

ಒಟ್ಟಿನಲ್ಲಿ ಬಿ.ಆರ್.ಟಿ.ಎಸ್. ಯೋಜನೆ ಇಂತಹದೊಂದು ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ವಿಶೇಷವಾಗಿದೆ. ಇನ್ನೂ ಹೆಚ್ಚಿನ ಜನಪರ ಯೋಜನೆ ಮೂಲಕ ಬೆಳವಣಿಗೆ ಹೊಂದಲಿ ಎಂಬುದು ಸಾರ್ವಜನಿಕರ ಆಶಯವೂ ಹೌದು.

Edited By : Shivu K
Kshetra Samachara

Kshetra Samachara

01/10/2022 05:43 pm

Cinque Terre

26.27 K

Cinque Terre

0

ಸಂಬಂಧಿತ ಸುದ್ದಿ