ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೂರು ದಿಕ್ಕುಗಳಲ್ಲಿ ಶ್ರೀ ಸಿದ್ಧಾರೂಢರ ರೈಲ್ವೆ ನಿಲ್ದಾಣಕ್ಕೆ ದ್ವಾರ

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ವಿಶ್ವದಲ್ಲೇ ಅತ್ಯಂತ ಉದ್ದನೆಯ ಪ್ಲಾಟ್‌ಫಾರಂ ಹೊಂದಿರುವ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣಕ್ಕೆ ಮೂರನೇ ಪ್ರವೇಶ ದ್ವಾರ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈ ಮೂಲಕ ರೈಲು ನಿಲ್ದಾಣವು ಮೂರು ದಿಕ್ಕುಗಳಲ್ಲಿ ಪ್ರವೇಶ ದ್ವಾರವನ್ನು ಹೊಂದಿದಂತಾಗಿದೆ.

ಹೌದು. ಶ್ರೀ ಸಿದ್ಧಾರೂಢರ ಸ್ವಾಮೀಜಿ ರೈಲು ನಿಲ್ದಾಣ ಜನರಿಗೆ ಅನುಕೂಲವಾಗಲೆಂದು ಮಂಟೂರು ರಸ್ತೆ ದಿಕ್ಕಿಗೆ ಮೂರನೇ ದ್ವಾರವನ್ನು ನಿರ್ಮಾಣ ಮಾಡಿದ್ದಾರೆ. ಇನ್ಮುಂದೆ ರೈಲ್ವೇ ನಿಲ್ದಾಣಕ್ಕೆ ಇದೀಗ ಮೂರು ದಿಕ್ಕಿನಿಂದಲೂ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಸಿಕ್ಕಂತಾಗಿದೆ. ನಿಲ್ದಾಣಕ್ಕೆ ಈಗಾಗಲೇ ಸ್ಟೇಷನ್ ರಸ್ತೆ ಕಡೆಯಿಂದ ಮುಖ್ಯದ್ವಾರ ಮತ್ತು ಗದಗ ರಸ್ತೆ ಕಡೆಯಿಂದ ಎರಡನೇ ದ್ವಾರವಿದೆ. ಎರಡೂ ಕಡೆ ಕಾಯ್ದಿರಿಸದ ಟಿಕೆಟ್ ಕೌಂಟರ್ ವ್ಯವಸ್ಥೆ ಇದೆ. ನೂತನವಾಗಿ ತಯಾರಾಗುತ್ತಿರುವ ದ್ವಾರದಲ್ಲಿಯೂ ಮೂರು ಕೌಂಟರ್‌ಗಳನ್ನು ತೆರೆಯಲಾಗಿದೆ.

ಮೂರನೇ ಪ್ರವೇಶ ದ್ವಾರವು ನಿಲ್ದಾಣದ 6 , 7 ಹಾಗೂ 8ನೇ ಪ್ಲಾಟ್‌ಫಾರಂಗೆ ಸಂಪರ್ಕ ಕಲ್ಪಿಸಲಿದೆ. ಇದರ ಜೊತೆಗೆ ಪ್ರಯಾಣಿಕರಿಗೆ ಅಗತ್ಯವಿರುವ ಕುಡಿಯುವ ನೀರು, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ಈಗಾಗಲೇ ದ್ವಾರದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಅಂತಿಮ ಹಂತದ ಕೆಲ ಕೆಲಸಗಳು ಪ್ರಗತಿಯಲ್ಲಿವೆ. ಎಲ್ಲಾ ಪೂರ್ಣಗೊಂಡ ಬಳಿಕ ರೈಲ್ವೆ ಸಚಿವಾಲಯದ ಮಾರ್ಗಸೂಚಿಯಂತೆ ದ್ವಾರವನ್ನು ಉದ್ಘಾಟಿಸಲಿದ್ದಾರೆ.

ಈ ರೈಲ್ವೆ ನಿಲ್ದಾಣವು 1504 ಮೀಟರ್ ಉದ್ದದ ಪ್ಲಾಟ್‌ಫಾರಂ ಹೊಂದಿರುವುದರಿಂದ ಅದಕ್ಕೆ ಪೂರಕವಾಗಿ ಮೂರನೇ ಪ್ರವೇಶ ದ್ವಾರ ನಿರ್ಮಿಸಲಾಗಿದೆಯಂತೆ. ಇದರಿಂದಾಗಿ ಗಾಂಧಿವಾಡ, ಅರಳಿಕಟ್ಟಿ , ಮಂಟೂರು ಸೇರಿದಂತೆ ಈ ಭಾಗಗಳ ಪ್ರಯಾಣಿಕರಿಗೆ ಟಿಕೆಟ್ ಸಹಿತ ರೈಲ್ವೇ ನಿಲ್ದಾಣ ಪ್ರವೇಶ ಇನ್ನಷ್ಟು ಹತ್ತಿರವಾಗಲಿದೆ. ಅಷ್ಟೇ ಅಲ್ಲದೆ ಇಲ್ಲಿ ವಿಶಾಲವಾದ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಆದಷ್ಟು ಮೂರನೇ ಪ್ರವೇಶ ದ್ವಾರ ಕಾಮಗಾರಿ ಮುಕ್ತಾಯಗೊಂಡು ಜನರಿಗೆ ಅನುಕೂಲವಾಗಲಿ ಎನ್ನುವುದು ನಮ್ಮೆಲ್ಲರ ಆಶಯ...

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ..

Edited By : Somashekar
Kshetra Samachara

Kshetra Samachara

21/09/2022 05:26 pm

Cinque Terre

46.46 K

Cinque Terre

3

ಸಂಬಂಧಿತ ಸುದ್ದಿ