ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಗ್ರಾಮ ವಾಸ್ತವ್ಯದಲ್ಲಿ ಸ್ವಿಕೃತಗೊಂಡ 8 ಅರ್ಜಿಗಳು

ನವಲಗುಂದ: ಪ್ರತಿ ಮೂರನೇ ಶನಿವಾರ ತಾಲೂಕಾ ದಂಡಾಧಿಕಾರಿಗಳ ನೇತೃತ್ವದಲ್ಲಿ ಒಂದೊಂದು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸಲು ಹಾಗೂ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಈ ಹಿನ್ನೆಲೆ ಇಂದು ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ತಹಶೀಲ್ದಾರ ಅನಿಲ ಬಡಿಗೇರ ಅವರ ನೇತೃತ್ವದಲ್ಲಿ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು 220 ಸಾರ್ವಜನಿಕರು ಭಾಗಿಯಾಗಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಸ್ವಿಕೃತವಾದ 8 ಅರ್ಜಿಗಳಲ್ಲಿ ಕಂದಾಯ 2, ಗ್ರಾಮ ಪಂಚಾಯತ್ 3, ಕೆ ಇ ಬಿ 2 ಹಾಗೂ ಪಿಡಬ್ಲ್ಯೂಡಿ 1 ಆಗಿವೆ. ಪುರಸ್ಕರಿಸಿ ಇತ್ಯರ್ಥ ಪಡಿಸಿದ ಅರ್ಜಿಗಳ ಸಂಖ್ಯೆ- 8 ಆಗಿವೆ. ಈ ವೇಳೆ ತಾಲೂಕಾ ಮಟ್ಟದ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/09/2022 08:15 pm

Cinque Terre

18.95 K

Cinque Terre

0

ಸಂಬಂಧಿತ ಸುದ್ದಿ