ಹುಬ್ಬಳ್ಳಿ: ಸೌರಶಕ್ತಿ ಮೂಲಕ ರೈಲು ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆ ಮಾಡಿ ನೂರಕ್ಕೂ ಕೋಟಿ ಉಳಿತಾಯ ಮಾಡಿದ್ದ ನೈಋತ್ಯ ರೈಲ್ವೆ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನ ಕಲ್ಲಿದ್ದಲು, ಡಿಸೇಲ್ ಮೂಲಕ ರೈಲು ಚಾಲನೆ ಮಾಡಿದ್ದ ಭಾರತೀಯ ರೈಲ್ವೆ ಈಗ ವಿದ್ಯುತ್ ಚಾಲಿತ ರೈಲು ಚಾಲನೆ ಮಾಡುವ ಇಂಧನ ಉಳಿತಾಯದ ಜೊತೆಗೆ ಪರಿಸರ ರಕ್ಷಣೆ ಹೊಣೆ ಹೊತ್ತಿದೆ.
ಹೌದು.. ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಚಿಂತನೆ ನಡೆಸಿದ್ದು, ಈಗಾಗಲೇ ದ್ವೀಪದ ಕಾಮಗಾರಿ ಜೊತೆಗೆ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಇಂಧನ ಮೇಲಿನ ಅವಲಂಬನೆ ಕೈ ಬಿಟ್ಟು ಪರಿಸರ ಸ್ನೇಹಿ ರೈಲ್ವೆಯಾಗುವತ್ತ ಮುನ್ನಡೆಯುತ್ತಿದೆ. ಈಗಾಗಲೇ 3600 ಕಿಲೋ ಮೀಟರ್ ರೈಲ್ವೆ ರೂಟ್ ಟ್ರ್ಯಾಕ್ ನಲ್ಲಿ ಸುಮಾರು 50% ವಿದ್ಯುತ್ತೀಕರಣ ಕಾಮಗಾರಿ ಪೂರ್ಣಗೊಂಡಿದೆ. 2024ರ ಮಾರ್ಚ್ ಹೊತ್ತಿಗೆ ಸಂಪೂರ್ಣ ವಿದ್ಯುತ್ತೀಕರಣ ಆಗುವ ಮೂಲಕ ಪರಿಸರ ಸ್ನೇಹಿಯಾಗಿ ನೈಋತ್ಯ ರೈಲ್ವೆ ಹೊರ ಹೊಮ್ಮಲಿದೆ.
ನೈಋತ್ಯ ರೈಲ್ವೆ ವಲಯದಲ್ಲಿರುವ ಕರ್ನಾಟಕ ಹಾಗೂ ಗೋವಾ ರಾಜ್ಯದ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿ ಭರದಿಂದ ಸಾಗಿದ್ದು, ಗುಣಮಟ್ಟದ ಸೇವೆಯ ಜೊತೆಗೆ ಪ್ರಯಾಣಿಕರ ಸಮಯಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಿದೆ.
ಒಟ್ಟಿನಲ್ಲಿ ನೈಋತ್ಯ ರೈಲ್ವೆ ವಿದ್ಯುದೀಕರಣದಲ್ಲಿ ದಾಖಲೆಯನ್ನು ಸಾಧಿಸಿದೆ. 2021-22 ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆಯು 1750 ರೂಟ್ ಕೀ.ಮೀಗಳ ವಿದ್ಯುದೀಕರಣವನ್ನು ಪೂರ್ಣಗೊಳಿಸಿದ್ದು, ಹಸಿರು ರೈಲ್ವೆಯಾಗಿ ಮಾಡಲು ನೈಋತ್ಯ ರೈಲ್ವೆ ನಿರ್ಧಾರ ಮಾಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 08:15 am