ಹುಬ್ಬಳ್ಳಿ: ಅದು ಸಾರ್ವಜನಿಕರ ಜನಪ್ರಿಯ ಸಾರಿಗೆ ಸೇವೆ. ಪ್ರಯಾಣಿಕರಿಗೆ ಮಾತ್ರವಲ್ಲದೆ ಸರಕು ಸಾಗಾಣಿಕೆಯಲ್ಲಿಯೂ ಹೊಸ ಹೊಸ ಪ್ರಯೋಗದ ಮೂಲಕ ಜನಮನ್ನಣೆ ಪಡೆದಿರುವ ಈ ಸೇವೆಯಲ್ಲಿ ಈಗ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ. ಅಷ್ಟಕ್ಕೂ ಯಾವುದು ಆ ಸೇವೆ? ಅದು ಮಾಡಿರುವ ದಾಖಲೆ ಆದರೂ ಏನು ಅಂತೀರಾ, ಈ ಸ್ಟೋರಿ ನೋಡಿ...
ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯ ಈಗ ರೈಲ್ವೆ ಇತಿಹಾಸದಲ್ಲಿ ದಾಖಲೆಯ ಆದಾಯವನ್ನು ಗಳಿಸುವ ಮೂಲಕ ಹೊಸ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ. ಹೌದು... ಏಪ್ರಿಲ್ ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿಯೇ ಪ್ಯಾಸೆಂಜರ್ ರೈಲು ಸಂಚಾರದ ಮೂಲಕ 1048 ಕೋಟಿ ಆದಾಯವನ್ನು ಗಳಿಸಿ ನೈಋತ್ಯ ರೈಲ್ವೆ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಏಪ್ರಿಲ್ ನಿಂದ ಆಗಸ್ಟ್ ವರೆಗೆ 450 ಕೋಟಿ ಆದಾಯ ಗಳಿಸಿತ್ತು. ಆದರೆ, ಈಗ ಹಳೆಯ ದಾಖಲೆ ಬ್ರೇಕ್ ಮಾಡಿ ಹೊಸ ದಾಖಲೆಗೆ ನಾಂದಿ ಹಾಡಿದೆ.
ಕೋವಿಡ್ ಸಂದರ್ಭದಲ್ಲಿ ಬಹುತೇಕ ಪ್ಯಾಸೆಂಜರ್ ರೈಲು ಸೇವೆ ಬಂದ್ ಮಾಡಲಾಗಿತ್ತು. ಆದರೆ, ಕೋವಿಡ್ ನಂತರ ಚೇತರಿಕೆ ಕಂಡಿರುವ ನೈಋತ್ಯ ರೈಲ್ವೆ ಪ್ಯಾಸೆಂಜರ್ ರೈಲಿನಲ್ಲಿಯೇ ಹೊಸ ಸಾಧನೆ ಮಾಡಿದೆ. ದ್ವಿಪಥ ಕಾಮಗಾರಿ, ವಿದ್ಯುತೀಕರಣ ಹಾಗೂ ಬಹುತೇಕ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಇಂತಹದೊಂದು ದಾಖಲೆ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.
ಒಟ್ಟಿನಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯ ಸಾರಿಗೆ ಸೇವೆ ಹಾಗೂ ಸರಕು ಸಾಗಣೆಯನ್ನು ಕೂಡ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ರೈಲ್ವೆ ಪ್ರತಿ ವಲಯದಲ್ಲಿ ಸಾಧನೆ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/09/2022 04:47 pm