ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಂಡೂ ಹೋದ ಕೊಂಡೂ ಹೋದ ಅನ್ನುವಂಗ ಆಗೇತಿ ಉಣಕಲ್ ಕೆರಿ: ರೊಕ್ಕ ಹೋಗೈತಿ, ಅಭಿವೃದ್ಧಿ ಕಾಣದಾಗೈತಿ

ಹುಬ್ಬಳ್ಳಿ: ನಮಸ್ಕಾರ ರೀ.. ಹುಬ್ಬಳ್ಳಿ ಧಾರವಾಡ ಮಂದಿಗೆ.. ನಿಮ್ಮ ಮನಸ್ಸಿಗೆ ಬಾಳ ಬ್ಯಾಸರ ಆಗುವಂತ ಒಂದು ವಿಷಯ ಐತಿ ನೋಡ್ರಿ. ನೀವು ಏನ ಬಿಡ್ರಿ ಸಾಕಷ್ಟು ಸರ್ಕಾರದ ಯೋಜನೆ ನೋಡಿ ಬ್ಯಾಸರ ಆಗಿರಿ. ಇದೇನು ದೊಡ್ಡ ಮಹಾ ಅಲ್ಲ ಅಂತಿರಿ. ಅಷ್ಟಕ್ಕೂ ಏನ ಆಗೈತಿ ಅಂತ ನೋಡಿಕೊಂಡ ಬರೋಣ ಬರ್ರೀ..

ಹೂಬಳ್ಳಿ ಅಂತ ಹುಬ್ಬಳ್ಳಿನ ಫೇಡಾದಂತ ಧಾರವಾಡನ ಮಸ್ತ್ ಕಾಣುವಂಗ ಮಾಡಬೇಕು ಅಂತ ಕಸರತ್ತ ಮಾಡಿ ನಮ್ಮ ಜನಪ್ರತಿನಿಧಿಗಳು ಸ್ಮಾರ್ಟ್ ಸಿಟಿ ಯೋಜನೆ ಹೊತಕೊಂಡ ಬಂದಾರ. ಆದರ ಇಲ್ಲಿ ಸ್ಮಾರ್ಟ್ ಆಗೋದು ಬಿಟ್ಟು ಬಾಳ ಕೆಟ್ಟ ಸ್ಮಾರ್ಟ್ ಆಗೈತಿ.

ಹೌದ ನೋಡ್ರಿ ಹುಬ್ಬಳ್ಳಿ ಪ್ರವಾಸಿ ತಾಣದಾಗ ಒಂದಾಗಿರೋ ಉಣಕಲ್ ಕೆರಿನ ಸ್ಮಾರ್ಟ್ ಮಾಡಿ ನೀರಾಗಿನ ಕಳೆ ತಗದು ಮಂದಿಗೆ ಮತ್ತ ಪ್ರವಾಸಿಗರಿಗೆ ಅನುಕೂಲ ಮಾಡಬೇಕ್. ಅಷ್ಟ ಅಲ್ಲದ ಜಲಸಂರಕ್ಷಣೆ ಮಾಡಬೇಕು ಅಂತ ನೀರಿಗಿಂತ ಹೆಚ್ಚಿಗೆ ರೊಕ್ಕ ಹಾಕ್ಯಾರ. ಆದ್ರ ಇಲ್ಲಿ ಯಾವುದೂ ಬರೋಬ್ಬರಿ ಆಗೇ ಇಲ್ಲ ನೋಡ್ರಿ. ಹಾಕಿದ್ದ ಕೋಟ್ಯಾಂತರ ರೂಪಾಯಿ ರೊಕ್ಕ ಉಣಕಲ್ ಕೆರಿ ಕೋಡಿ ಬಿದ್ದಾಗ ಹೆಂಗ ಹರದು ಹೊಕ್ಕೇತಲ್ಲ.. ಹಂಗ ಹರಿದು ಗೊತ್ತಾಗಲಾರದಂಗ ಯತ್ತಾಗೋ ಹೋಗಿ ಬಿಟ್ಟೈತಿ ನೋಡ್ರಿ..

ಕೇಳ್ರಪ್ಪೋ ಕೇಳ್ರಿ ಜಲ ಕಳೆ ತಗೆತೇವಿ. ಫ್ಲೋಟಿಂಗ್ ಪ್ಲಾಂಟ್ ಮಾಡ್ತಿವಿ. ಕಾರಂಜಿ ಹಚ್ಚಿ ನೀರು ಶುದ್ಧೀಕರಣ ಮಾಡ್ತಿವಿ ಅಂತ ಡಂಗುರ ಹೊಡೆದಂತ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸುಮ್ಮನ ಉದ್ದುದ್ದಗ ಕತಿ ಹೇಳಿ ಹೋಗಿ ಬಿಟ್ಟಾರ. ಆದ್ರ ಇಲ್ಲಿ ಮಂದಿಗೆ ಅನುಕೂಲ ಆಗುವಂತ ಕಿಂಚಿತ್ತೂ ಅಭಿವೃದ್ಧಿ ಏನೇನೂ ಆಗೇ ಇಲ್ಲ.

ಎತ್ತಾಗ ನೋಡ್ತೀರಿ ಅತ್ತಾಗ ಬಿದ್ದಿರುವ ಫ್ಲೋಟಿಂಗ್ ಪ್ಲಾಂಟ್ ಉಪಕರಣ, ಬೇಕಾಬಿಟ್ಟಿಯಾಗಿ ಬಿದ್ದಿರುವ ಕಾರಂಜಿ ಮಷಿನ್, ನಿರ್ವಹಣೆ ಆಗದೇ ಉಳಿದಿರುವ ಕಸ. ಇದರಿಂದ ಈ ಪುಣ್ಯಾತ್ಮರು ಏನ ಅಭಿವೃದ್ಧಿ ಮಾಡ್ಯಾರೋ ಏನೋ ಆ ಉಣಕಲ್ ಸಿದ್ದಪ್ಪಜ್ಜಗ ಗೊತ್ತು ನೋಡ್ರಿ ಪಾ..

ಸುಮಾರು ಕೋಟಿ ರೂ. ರೊಕ್ಕ ಹಾಕಿ ಸ್ಮಾರ್ಟ್ ಮಾಡ್ತಿವಿ ಅಂತ ಹೇಳಿ ಬಾಯಿ ಬಾಯಿ ಬಡಕೊಂಡ್ರಲ್ಲ ಈ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತ ಜನಪ್ರತಿನಿಧಿಗಳು ಈಗ ಸುಮ್ಮನ ಮೊಬೈಲ್ ಸೈಲೆಂಟ್ ಮಾಡಿದಂಗ ಸೈಲೆಂಟ್ ಆಗಿಬಿಟ್ಟಾರ ನೋಡ್ರಿ ಹಿಂಗಾದ್ರ ಹೆಂಗ್ ಜೀವನ ಮಾಡಬೇಕ್ ನೀವ ಹೇಳ್ರಿ..

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/09/2022 03:46 pm

Cinque Terre

55.04 K

Cinque Terre

6

ಸಂಬಂಧಿತ ಸುದ್ದಿ