ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ನಿರ್ಮಾಣ ಕಾರಣ ಬರೋಬ್ಬರಿ ಒಂದೂವರೆ ವರ್ಷ ಸ್ಥಗಿತಗೊಂಡಿದ್ದ ಶರೇವಾಡ ಟೋಲ್ ಪುನಃ ಆಗಷ್ಟ್ 19 ರಿಂದ ಆರಂಭ ಕಂಡು ಹಗಲು ದರೋಡೆ ನಡೆಸಿದೆ ಎಂದು ಜನರು ಹೇಳ್ತಾ ಇದ್ದಾರೆ.
ಹೌದು ...ಸದ್ಯ ನಾಲ್ಕು ದಿನಗಳಿಂದ ಆರಂಭವಾದ ಟೋಲ್‌ಗೇಟ್'ನಲ್ಲಿ ವಾಹನದ ಪಾಸ್ಟ್ಯಾಗ್ ಸ್ಕ್ಯಾನ್ ಆಗೋದಿಲ್ಲಾ. ಅಂದ್ರೇ ನೀವೂ ಪಾಸ್ಟ್ಯಾಗ್ ಇದ್ರೂ ಸಹ ನಗದು ಹಣ ಕೊಟ್ಟು ರಸಿದೀ ಪಡೆಯಬೇಕು. ನೀವೂ ಪಾಸ್ಟ್ಯಾಗ ಸ್ಕ್ಯಾನ್ ಮಾಡಿ ಎಂದ್ರೇ ವಾಗ್ವಾದ ಆರಂಭ ಆಗಿ ಬಿಡುತ್ತೇ, ಇನ್ನೂ ಮುಖ್ಯವಾಗಿ ಟೋಲ್ ಹಣ ಪಡೆಯುವ ವ್ಯಕ್ತಿ ಯಾರು ಎಂಬುದೇ ಗೊತ್ತಿಲ್ಲಾ.
ಟೋಲ್ ಹಣ ಪಡೆಯುವ ಸಿಬ್ಬಂದಿಗೆ ಸಮವಸ್ತ್ರ, ಗುರುತಿನ ಚೀಟಿ ಇಲ್ಲಾ, ಸ್ಥಳದಲ್ಲಿರುವ ಟೋಲ್ ಸುಪರವೈಸ್ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲಾ.ಈ ಕಾರಣ ಗೂಡ್ಸ್ ವಾಹನ ಸೇರಿದಂತೆ ಸಾಮಾನ್ಯ ಕಾರು ಇತರೆ ವಾಹನ ಸವಾರರು ಕೆಲವರು ಸುಮ್ನೆ ಹಣ ಕೊಟ್ರೇ ಕೆಲವರು ವಾದಕ್ಕೆ ಇಳಿದರೂ ಪ್ರಯೋಜನ ಮಾತ್ರ ಶೂನ್ಯ.
ಇನ್ನೂ ಈ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಿರೂರು ಬ್ರಿಡ್ಜ್ ಕಾಮಗಾರಿಗೆ ತಾರ್ಕಿಕ ಅಂತ್ಯ ನೀಡದೆ, ಇಲ್ನೋಡಿ ಬ್ರಿಡ್ಜ್ ಮೇಲೆ ಸಮರ್ಪಕ ರಸ್ತೆ ಸೂಚನಾ ಫಲಕ, ರಸ್ತೆ ತಡೆಗೆ ಅಲ್ಯೂಮಿನಿಯಂ ತಡೆಗೋಡೆ ಬದಲಾಗಿ ಈ ರೀತಿ ಅಳಿದುಳಿದ ಸಿಮೆಂಟ್ ನಿಲ್ಲಿಸಿದ್ದಾರೆ.. ನಾವು ಕೇಳಿದ್ರೇ ಕೆ.ಆರ್.ಡಿ.ಸಿ.ಎಲ್ ನಮಗೆ ಲೆಟರ್ ಕೊಟ್ಟಿದೆ ನಾವು ಇನ್ನೂ ಟೋಲ್'ಗೆ ಪರ್ಮಿಶನ್ ಕೊಟ್ಟಿಲ್ಲಾ ಅಂತಾರೇ.
ಇದಲ್ಲದೆ ಟೋಲ್ ಆರಂಭದ ಪರಿಣಾಮ ಸಾರಿಗೆ ಬಸ್ ದರ ಕುಂದಗೋಳ ಹುಬ್ಬಳ್ಳಿ ಆರ್ಡಿನರಿ 27 ರೂಪಾಯಿ ಇದ್ದದ್ದು 31 ಏರಿಕೆ ಆದ್ರೇ, ಎಕ್ಸಪ್ರೆಸ್ ದರ 30 ರೂಪಾಯಿ ಇದ್ದದ್ದು 34 ರೂಪಾಯಿಗೆ ಏರಿಕೆ ಕಂಡಿದೆ, ಇದರಂತೆ ಗ್ರಾಮೀಣ ಬಸ್ ದರಗಳು ಸಹ ಏರಿಕೆ ಆಗಿವೆ.
ಒಟ್ಟಾರೆ ಕರ್ನಾಟಕ ರೋಡ್ ಡೆವಲಪಮೇಂಟ್ ಕಾರ್ಪೋರೇಷನ್ ಕೆ.ಆರ್.ಡಿ.ಸಿ.ಎಲ್ ಮನಬಂದಂತೆ ಹಕ್ಕು ಚಲಾಯಿಸಿ ಹಣ ವಸೂಲಿಗೆ ಮುಂದಾಗಿದೆ ಎನ್ನುತ್ತಿದ್ದಾರೆ ಜನರು.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/08/2022 08:30 am