ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸ್ಮಾರ್ಟ್ ಆಗುತ್ತಿಲ್ಲ ರಸ್ತೆಗಳು: ಕೋಟ್ಯಾಂತರ ರೂಪಾಯಿ ಯೋಜನೆ ಹೊಳೆಯಲ್ಲಿ ಹೋಮ

ಧಾರವಾಡ: ಅದೆಷ್ಟೋ ಯೋಜನೆಗಳು ಅವಳಿನಗರಕ್ಕೆ ಬಂದರೂ ಕೂಡ ಅವಳಿನಗರದ ರಸ್ತೆಗಳ ಸಮಸ್ಯೆಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ. ಸಿಆರ್‌ಎಫ್ ಅನುದಾನದಲ್ಲಿ ಪಾಲಿಕೆ ರಸ್ತೆ ಕಾಮಗಾರಿ ಕೈಗೊಂಡರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.

ಹೌದು...ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದ ಧಾರವಾಡದ ಪ್ರತಿಷ್ಠಿತ ಸಿಬಿಟಿಯಲ್ಲಿ ರಸ್ತೆಗಳು ದೊಡ್ಡಮಟ್ಟದ ಗುಂಡಿಗಳು ಬಿದ್ದಿದ್ದು, ಸಾವಿರಾರು ಜನರು ಓಡಾಡುವ ಆಯಕಟ್ಟಿನ ಪ್ರದೇಶದ ಸ್ಥಿತಿಯೇ ಹೇಳ ತೀರದಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದ ಯೋಜನೆಗಳು ಹೊಳೆಯಲ್ಲಿ ಹೋಮ ಮಾಡಿದಂತಾಗುತ್ತಿದೆ.

ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹುಬ್ಬಳ್ಳಿ ಧಾರವಾಡ ಅವಳಿನಗರವನ್ನು ಸ್ಮಾರ್ಟ್ ಮಾಡಲು ಹೊರಟಿವೆ. ಆದರೆ ದುರದೃಷ್ಟಕರ ಸಂಗತಿ ಅಂದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಮಾರ್ಟ್ ಆಗ್ತಿದ್ದಾರೆ ವಿನಃ ಯಾವುದೇ ಯೋಜನೆಯಿಂದ ಜನರು ಮಾತ್ರ ಸ್ಮಾರ್ಟ್ ಆಗುತ್ತಿಲ್ಲ.

ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು, ನೂರಾರು ವಾಹನಗಳು ಓಡಾಡುತ್ತವೆ. ವೃದ್ಧರು, ಮಕ್ಕಳು, ಮಹಿಳೆಯರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಇನ್ನಾದರೂ ಸ್ಥಳೀಯ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳು ಎಚ್ಚೇತ್ತುಕೊಂಡ ಸೂಕ್ತ ಕ್ರಮಗಳನ್ನು ಜರುಗಿಸಿ ರಸ್ತೆ ದುರಸ್ತಿ ಮಾಡಬೇಕಿದೆ.

Edited By : Nagaraj Tulugeri
Kshetra Samachara

Kshetra Samachara

10/08/2022 12:16 pm

Cinque Terre

24.46 K

Cinque Terre

8

ಸಂಬಂಧಿತ ಸುದ್ದಿ