ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ರೈತರ ದಾರಿಯಲ್ಲಿ ಕಲ್ಲು ಮುಳ್ಳು ಜನಪ್ರತಿನಿಧಿಗಳ ಕಣ್ಣು ಕುರುಡಾ ?

ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ

ಕುಂದಗೋಳ: ಜನಪ್ರತಿನಿಧಿಗಳು ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡ್ತಾರೆ ಆದ್ರೆ! ರೈತಾಪಿ ಜನರ ಸಮಸ್ಯೆಗಳನ್ನೇ ಆಲಿಸುವುದೇ ಇಲ್ಲ ನೋಡಿ.

ಹೌದು! ಸ್ವತಂತ್ರ ಬಂದು 75 ವರ್ಷ ಗತಿಸುತ್ತಲಿದ್ದರೂ, ಆ ಒಂದು ಗ್ರಾಮದ ರೈತರು ತಮ್ಮ ಹೊಲಕ್ಕೆ ಹೋಗಲು ನರಕಯಾತನೆ ಪಡುತ್ತಿದ್ದಾರೆ. ಇನ್ನೂ ಕೆಲ ರೈತರು ಹೊಲಕ್ಕೆ ದಾರಿ ಇಲ್ಲ ಎಂಬ ಕಾರಣಕ್ಕೆ ಹೊಲ ಉತ್ತದೆ ಬಿತ್ತದೆ ಕೈ ಬಿಟ್ಟಿದ್ದಾರೆ.

ಎಸ್.! ಈ ತರಹದ ಅವ್ಯವಸ್ಥೆ ಸುಳಿಯಲ್ಲೇ ಸಿಲುಕಿರೋದೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮಸ್ಥರು ಚಾಕಲಬ್ಬಿಯಿಂದ ಹಿರೇಗುಂಜಳಕ್ಕೆ ಸಂಪರ್ಕ ಮಾಡೋ ಕೇವಲ 4 ಕಿಲೋ ಮೀಟರ್ ರಸ್ತೆಗೆ ಇಂದಿಗೂ ಹಿಡಿ ಮಣ್ಣು ಬಿದ್ದಿಲ್ಲ. ರಸ್ತೆ ಅಭಿವೃದ್ಧಿಗೆ ಎಂಎಲ್ಎ, ಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿಗೆ ಚಪ್ಪಲಿ ಸವೆಸಿ ಇದೀಗ ಇದೇ ರಸ್ತೆಯಲ್ಲಿ ಮಳೆಯಾದ್ರೇ ಚಪ್ಪಲಿ ಕೈಯಲ್ಲಿ ಹಿಡಿದು ರೈತಾಪಿ ಜನ ಕಾಯಕಕ್ಕೆ ಜಮೀನಿಗೆ ತೆರಳುತ್ತಿದ್ದಾರೆ.

ಈ ರಸ್ತೆ ಅವ್ಯವಸ್ಥೆಯ ನೋಡಿದ್ರೇ ಇಲ್ಲಿ ಹರಸಾಹಸ ಪಟ್ಟು ಟ್ರ್ಯಾಕ್ಟರ್ ಓಡಿಸಬೇಕು ಅದು ಹಾಳಾದ್ರೂ ಸರಿ, ಚಕ್ಕಡಿ ಎತ್ತು ಇಲ್ಲಿ ಹೋಗೋದೆ ಇಲ್ಲಾ ಬಿಡಿ, ಅಷ್ಟರಮಟ್ಟಿಗೆ ಇಲ್ಲಿ ಕಸ ಕಡ್ಡಿ ರಾಡಿ ನೀರು ಸಂಗ್ರಹವಾಗಿ ಬೃಹತ್ ತಗ್ಗು ಬಿದ್ದಿರುವ ಈ ದಾರೀಗೆ ಹೊಂದಿಕೊಂಡೇ ಚಾಕಲಬ್ಬಿ ರೈತರ ನೂರಾರು ಎಕರೆ ಜಮೀನು ಇವೆ.

ಒಟ್ಟಾರೆ ಸರ್ಕಾರದ ನೊರೆಂಟು ಯೋಜನೆ ಈ ರೈತಾಪಿ ಜನರಿಗೆ ಕಗ್ಗಂಟಾಗಿದ್ದು, ಇಂತಹ ನರಕಕ್ಕೆ ದಾರಿ ತೋರುವ ರಸ್ತೆಯಲ್ಲೇ ದೇಶದ ಬೆನ್ನೆಲುಬು ಅನ್ನದಾತನ ಕಾಯಕ ನಿತ್ಯ ಕಷ್ಟದಲ್ಲೇ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

27/07/2022 05:32 pm

Cinque Terre

64.63 K

Cinque Terre

0

ಸಂಬಂಧಿತ ಸುದ್ದಿ