ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ನಮಸ್ಕಾರ ರೀ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ
ಅಲ್ರೀ, ಈ ಹಳ್ಳಿ ಕಡೆ ಒಂದು ಗಾದೆ ಮಾತು ಇದೆ ಗೊತೇನ್ರೀ ಕರೆದು ಹೆಣ್ಣು ಕೊಟ್ಟರೆ ಅಳಿಯಾಗ ಮಲರೋಗ ಐತಿ ಅಂದ್ರಂತ. ನಿಮ್ಮ ವಿಷಯದಾಗೂ ಈ ಗಾದೆ ಮಾತ ಬಹಳ ಅನ್ವಯ ಆಗ್ತಾ ಇದೆ ಅಂತ್ಹೇಳಿ ಜನಾ ಹೇಳ್ತಾ ಇದ್ದಾರೆ.
ಹೌದ ರೀ ! ಸದ್ಯ ನೀವೂ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಕಟ್ಟಡ ಸುತ್ತ ಶಿಥಿಲಾವಸ್ಥೆ ತಲುಪೇತಿ. ಮಳಿ ಬಂದ್ರ ಸಾಕ್. ಇಡೀ ಬಿಲ್ಡಿಂಗ್ ಸೋರತೇತಿ. ಆದರೂ ಸತೇಕ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೂಚಿಸಿದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದ 6,7,8 ಕೊಠಡಿಗೆ ಬರಾಕತ್ತಿಲ್ಲ. ಬಂದು ನೋಡಾಕತ್ತಿಲ್ಲ. ಹಂಗಾಗಿ ನಿಮ್ಮ ಮ್ಯಾಲ ನಮಗ ಯಾಕೋ ಸಂಶಯ ಬರಾಕತ್ತೇತಿ.
2018ರ ಸಪ್ಟೆಂಬರ್ 10ಕ್ಕ ತಮಗ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದೊಳಗ ತಮ್ಮ ಇಲಾಖೆ ಕರ್ತವ್ಯ ಆರಂಭಿಸಲು ತಾ.ಪಂ ಕಚೇರಿ ಆದೇಶ ಕೊಟ್ಟಿತ್ತು. ಆ ಬಳಿಕ ನೀವೂ ಅಲ್ಲಿ ಹೋಗಲಾರದ ಎರಡು ತಿಂಗಳ ನಿರ್ವಹಣಾ ಖರ್ಚಿನ ರಶೀದಿ ತಗೋಂಡಿರಂತ. ಆ ಮ್ಯಾಲೆ ತಾಪಂ ಅಧಿಕಾರಿಗಳು ನಿಮಗೆ ಮತ್ತೊಮ್ಮೆ ತಮಗೆ ನೋಟಿಸ್ ನೀಡಿ ಇಲಾಖೆ ಹಣ ಪಾವತಿ ಮಾಡುವಂತೆ ಕೇಳಿದ್ರೂ ಸತೇಕ ನೀವು ಮಾತ್ರ ಗಪ್ ಚುಪ್ ಆಗಿ ಆ ಹಳೇ ಕಟ್ಟಡದಾಗ ಯಾಕೆ ಕುಂತೀರಿ ಅನ್ನೊದಕ್ಕೆ ಸ್ಪಷ್ಟ ಉತ್ತರ ಬೇಕಾಗೇತಿ ನಮಗ.
ಇನ್ನ್ ಈ ಬಗ್ಗೆ ಜನರು ರೈಲ್ವೆ ಸ್ಟೇಷನ್ ಕಡೆ ಇರುವ ಪಟ್ಟಣದ ಕೊನೆಯ ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಅಗ್ಗದಿ ಹೇಳಿ ಮಾಡಿಸಿದ್ಹಂಗ ಐತಿ ಅಂತಾರ್. ಒಟ್ಟು ಏನರ್ ಇರಲಿ ನೋಡ್ರಿ ಅಧಿಕಾರಿಗಳೇ ಚಲೋ ಕಟ್ಟಡಕ್ಕೆ ಬಂದು ಸರ್ಕಾರಿ ಸೇವೆ ಮಾಡ್ರಿ. ಇಲ್ಲಾ ಆ ಕಟ್ಟಡ ನಿರಾಕರಣೆ ಮಾಡಿ ಬೇರೆಯವರ ಉಪಯೋಗಕ್ಕೆ ನೀಡ್ರಿ ಅಂತ ಮಂದಿ ಹೇಳಾಕತ್ತಾರ. ನೋಡ್ರಿ ಮಂದಿ ಮಾತಿಗರ ಮರ್ಯಾದಿ ಕೊಡ್ರಿ.
Kshetra Samachara
22/07/2022 08:43 am