ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಿ ರಸ್ತೆಯಲ್ಲಿ ಗುಂಡಿಗಳ ಕಾರುಬಾರು; ಸವಾರರ ಪರದಾಟ

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ನಗರದಲ್ಲಿ ಅತಿ ಹೆಚ್ಚು ವಾಹನ ದಟ್ಟನೆ ಇರುವ ರಸ್ತೆ. ಈ ರಸ್ತೆಯಲ್ಲಿ ಅದೆಷ್ಟು ವಾಹನಗಳು ಓಡಾಡುತ್ತವೆ ಎನ್ನುವುದು ಲೆಕ್ಕ ಹಾಕುತ್ತಾ ಕುಳಿತರೆ ಬಹುಶ ಲಕ್ಷ ದಾಟ ಬಹುದೇನೋ? ಆದರೆ ಆ ರಸ್ತೆಯ ಸ್ಥಿತಿ ಮಾತ್ರ ಯಾವುದೋ ಹೊಲಕ್ಕೊ, ಗದ್ದೆಗೊ ಹೊಗುವಂತಾ ರಸ್ತೆಯಂತೆ ಭಾಸವಾಗುತ್ತದೆ. ಹಾಗಿದ್ರೆ ಯಾವುದು ಆ ರಸ್ತೆ ಅಂತೀರಾ ಇಲ್ಲಿದೆ ನೋಡಿ.

ವಾಣಿಜ್ಯ ನಗರಿ ಹುಬ್ಬಳ್ಳಿಯ ಹಿರಮೆಯಾದ ಚನ್ನಮ್ಮ ವೃತ್ತದಿಂದ, ಹಳೇ ಕೊರ್ಟ್ ಮುಂಭಾಗವಾಗಿ ಸಾಯಿಬಾಬಾ ಮಂದಿರದ ಮುಂದೆ ಹಾದು ಹೊಗುವ ಈ ರಸ್ತೆ, ಸಂಪುರ್ಣವಾಗಿ ಹಾಳಾಗಿ ಹೊಗಿದೆ, ಹಾಳಾಗುವದು ಅನ್ನೊದಕ್ಕಿಂತ ನಡಿಯಲು ಕೂಡ ಯೋಗ್ಯವಲ್ಲದ ರೀತಿಯಲ್ಲಿ ಮಾರ್ಪಾಡಾಗಿದೆ. ವಾಣಿಜ್ಯ ನಗರಿ ಎಂದು ಖ್ಯಾತಿ ಪಡೆದ ಹುಬ್ಬಳ್ಳಿಗೆ ಸುತ್ತಲಿನ ಹಳ್ಳಿಗಳಿಂದ, ಬೇರೆ ಜೀಲ್ಲೆಗಳಿಂದ ವ್ಯಾಪಾರ ವಹಿವಾಟಿಗೆ ಜನ ಬರುತ್ತಾರೆ, ಹೀಗೆ ಬರುವ ವಾಹನಗಳಲ್ಲಿ ಭಾಗಶಃ ಅರ್ಧದಷ್ಟು ವಾಹನಗಳು ಈ ರಸ್ತೆಯ ಮೂಲಕವೆ ಸಂಚರಿಸುತ್ತವೆ.

ವಾಹನ ಸವಾರರು ಅನೇಕ ಭಾರಿ ಈ ರಸ್ತೆಯ ಗುಂಡಿಗಳಲ್ಲಿ ಬಿದ್ದಿದ್ದು ಸಹ ಇದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅವಳಿ ನಗರದ ತುಂಬೆಲ್ಲಾ ಕಾಮಗಾರಿಗಳು ನಡೆಯುತ್ತಿವೆ ನಿಜ, ಆದರೆ ಇಂತಹ ಪ್ರಮುಖ ರಸ್ತೆಗಳ ಗುಂಡಿಗಳನ್ನಾದರು ಮುಚ್ಚುವ ಕಾಮಗಾರಿಗಳು ನಡೆಯಬೇಕಿದೆ.

ಸಂಬಂಧಿಸಿದ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾಗಳು ಕೂಡಲೆ ಇತ್ತ ಗಮನ ಹರಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Edited By : Somashekar
Kshetra Samachara

Kshetra Samachara

15/07/2022 07:20 pm

Cinque Terre

76.09 K

Cinque Terre

8

ಸಂಬಂಧಿತ ಸುದ್ದಿ