ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತೋತ್ಸವ ಸಂಭ್ರಮ; ನೈರುತ್ಯ ರೈಲ್ವೆಯಿಂದ ಬೈಕ್ ರ್‍ಯಾಲಿ

ಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ನೈರುತ್ಯ ರೈಲ್ವೆ ಹುಬ್ಬಳ್ಳಿ‌ ವಿಭಾಗದಿಂದ ರೈಲ್ವೆ ರಕ್ಷಣಾ ದಳದ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡ್ ಹೇಳಿದರು.

ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಎದುರು ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ‌ ಅವರು ಮಾತನಾಡಿದರು. ಬೈಕ್ ರ್‍ಯಾಲಿಯು ವಿಭಾಗೀಯ ವ್ಯಾಪ್ತಿಯ 25 ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಬೈಕ್ ರ್‍ಯಾಲಿಯಲ್ಲಿ 10 ಮಂದಿಯ ತಂಡವಿದ್ದು, 75ನೇ ಸ್ವಾತಂತ್ರ್ಯೋತ್ಸವ ವರ್ಷದ ವಿಶಿಷ್ಟ ರೀತಿಯ ಆಚರಣೆ ಇದಾಗಿದೆ ಎಂದರು.

ಧಾರವಾಡ, ಖಾನಾಪುರ, ಅಳ್ಳಾವರ, ಬೆಳಗಾವಿ, ಗದಗ, ಹೊಸಪೇಟೆ, ಬಳ್ಳಾರಿ, ಬಾಗಲಕೋಟೆ, ಎಲವಗಿ ಸಹಿತ ವಿವಿಧ ಕಡೆಗಳಿಗೆ ರ್‍ಯಾಲಿ ಸಂಚರಿಸಲಿದೆ. ಆಗಸ್ಟ್ 15 ರಂದು ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲಿದೆ ಎಂದು ಹೇಳಿದರು.

Edited By :
Kshetra Samachara

Kshetra Samachara

01/07/2022 01:40 pm

Cinque Terre

27.51 K

Cinque Terre

0

ಸಂಬಂಧಿತ ಸುದ್ದಿ