ಕುಂದಗೋಳ: ಎಲ್ಲೇಡೆ ಮುರುಕು ಆಸನಗಳು, ಗೋಡೆ ತುಂಬಾ ಗುಟ್ಕಾ ಎಲೆ ಅಡಿಕೆ ಕಲೆ, ಬೀಳುವ ಹಂತದ ಗೋಡೆಗಳು,ಅಪಾಯಕಾರಿ ವಿದ್ಯುತ್ ಬೋರ್ಡ್,ಕಿತ್ತೋದ ಹಾಸುಕಲ್ಲುಗಳು, ಡಬ್ಬ ತುಂಬಿದ ಕಸ, ಇದುವೇ ಕುಂದಗೋಳ ತಹಶೀಲ್ದಾರ ಕಚೇರಿ.
ಸಂಪೂರ್ಣ ಕುಂದಗೋಳ ತಾಲೂಕನ್ನೇ ಸುಧಾರಿಸಬೇಕಾದ ತಾಲೂಕು ಕಚೇರಿ ತನ್ನನ್ನೇ ತಾನು ಸುಧಾರಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆ.
ನಿತ್ಯ ಕಚೇರಿಗೆ ಬರುವ ಜನ ಆಸನ ಇಲ್ಲದೆ ಎಲ್ಲೇಂದರಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನತೆ ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿ ಸೇರಿದಂತೆ ಮುಖ್ಯವಾಗಿ ಮಹಿಳಾ ಸಿಬ್ಬಂದಿಗೂ ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲಾ.
ಇನ್ನೂ ಸ್ವಚ್ಚತೆ ಎಂಬ ಪದಕ್ಕೆ ತದ್ವಿರುದ್ಧವಾದ ತಹಶೀಲ್ದಾರ ಕಚೇರಿ ಆವರಣ ಕೆಸರು, ಕೊಳಚೆ, ಕಸ, ಕಡ್ಡಿಯ ಕಣಜವಾಗಿದೆ. ಸಾರ್ವಜನಿಕ ಶೌಚಾಲಯದಕ್ಕೆ ಬೀಗ ಜಡಿದಿದ್ದು, ತಾಲೂಕು ಕಚೇರಿ ಎಂದ್ರೇ ಜನ ನಾಚಿಕೆ ಪಡವಂತಹ ನಿರ್ವಹಣೆಯ ನಡುವೆ ಸಾರಾಯಿ ಪಾಕೆಟ್ ಗ್ಲಾಸ್ ಎಲ್ಲೇಂದರಲ್ಲಿ ಬಿದ್ದಿವೆ.
ನಿತ್ಯ ನೂರೆಂಟು ಸೇವೆ ನೀಡಬೇಕಾದ ತಹಶೀಲ್ದಾರ ಕಚೇರಿಗೆ ಬರುವ ಜನ ಕಾಂಪೌಂಡ್, ಗೋಡೆ, ಮೆಟ್ಟಿಲು, ಬೈಕ್ ಪಾರ್ಕಿಂಗ್ ಜಾಗದಲ್ಲಿ ಕೂರುವಂತಹ ಅನಾಗರೀಕತೆ, ವಿಕೇಂಡ್ ಮಸ್ತಿಗೆ ಬಂದಂತೆ ಎಲ್ಲೇಂದರಲ್ಲಿ ವಾಹನ ಪಾರ್ಕಿಂಗ್ ಮಾಡಿದ್ರೂ ತಹಶೀಲ್ದಾರ ಗಪ್ ಚುಪ್ ಇದ್ದಾರೆ.
ಇನ್ನೂ ಅಲ್ಲಿನ ಸಿಬ್ಬಂದಿಗೆ ಕಚೇರಿ ನಿರ್ವಹಣೆ ಮಾಹಿತಿ ಕೇಳಿದ್ರೆ ನಮ್ಗೆ ಗೊತ್ತಿಲ್ಲಾ ತಹಶೀಲ್ದಾರ ಅವರನ್ನೇ ಕೇಳಿ ಎಂದು ಪಗಾರಕ್ಕೆ ಸೀಮಿತ ಆಗಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
25/06/2022 03:41 pm