ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಿಲ್ಲಾಧಿಕಾರಿಗಳೇ ನಿಮ್ಮ ಕಚೇರಿಯ ಶೌಚಾಲಯವನ್ನೊಮ್ಮೆ ನೋಡಿ..

ಧಾರವಾಡ: ಹುಬ್ಬಳ್ಳಿ, ಧಾರವಾಡ ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುತ್ತದೆ. ಈ ಸ್ಮಾರ್ಟ್ ಸಿಟಿಗೆ ಆದ್ಯತೆ ನೀಡುವ ಅದರಲ್ಲೂ ಜಿಲ್ಲೆಯ ಎಲ್ಲಾ ಇಲಾಖೆಗಳ ಮೇಲೆ ಹಿಡಿತ ಹೊಂದಿರುವ ಜಿಲ್ಲಾಧಿಕಾರಿಗಳ ಕಚೇರಿಯ ಶೌಚಾಲಯವೇ ಗಬ್ಬೆದ್ದು ನಾರುತ್ತಿದೆ. ಬಹುಶಃ ಇದನ್ನು ನಮ್ಮ ಜಿಲ್ಲಾಧಿಕಾರಿಗಳು ನೋಡಿಲ್ಲವೆಂದು ಕಾಣುತ್ತದೆ.

ಹೊಸ ಕಟ್ಟಡದಲ್ಲಿ ಅಲ್ಲಿನ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ ಶೌಚಾಲಯದಲ್ಲಿನ ಮೂತ್ರ ವಿಸರ್ಜನೆ ಮಾಡುವ ಸಿಂಕ್, ಕೈ ತೊಳೆಯುವ ಸಿಂಕ್‌ಗಳು ಬ್ಲಾಕ್ ಆಗಿ ಗಬ್ಬೆದ್ದು ನಾರುತ್ತಿವೆ. ಅಲ್ಲದೇ ಅದೇ ಸಿಂಕ್‌ನಲ್ಲಿ ಗುಟ್ಕಾ ಹಾಗೂ ಎಲೆ, ಅಡಿಕೆ ತಿಂದು ಉಗುಳಿದ್ದು, ಬಿಳಿಯ ಸಿಂಕ್‌ಗಳಿಗೆ ಕೆಂಪು ಬಣ್ಣ ಬಳಿದಂತೆ ಕಾಣುತ್ತಿವೆ.

ಇನ್ನು ಡಿಸಿ ಕಚೇರಿ ಕಟ್ಟಡದ ಕೆಳ ಭಾಗದಲ್ಲಿರುವ ಶೌಚಾಲಯದ್ದೂ ಅದೇ ಪರಿಸ್ಥಿತಿ. ಶೌಚಾಲಯದ ಸುತ್ತಮುತ್ತ ಕಸ ಬಿದ್ದು, ನೋಡಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಶೌಚಾಲಯವಂತೂ ಗಬ್ಬೆದ್ದು ನಾರುತ್ತಿದೆ. ಇವುಗಳನ್ನು ನೋಡಿದರೆ ಪಾಲಿಕೆ ವ್ಯಾಪ್ತಿಯಲ್ಲಿನ ಶೌಚಾಲಯಗಳೇ ಎಷ್ಟೋ ವಾಸಿ ಎಂದೆನಿಸುತ್ತಿದೆ. ವಾರಕ್ಕೊಮ್ಮೆಯಾದರೂ ಆ ಶೌಚಾಲಯಗಳನ್ನು ಶುಚಿಗೊಳಿಸಲಾಗುತ್ತದೆ. ಆದರೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಈ ಶೌಚಾಲಯವನ್ನು ಶುಚಿಗೊಳಿಸಿ ಅದೆಷ್ಟು ದಿನ ಕಳೆದಿದೆಯೋ ಗೊತ್ತಿಲ್ಲ. ಒಮ್ಮೆ ಜಿಲ್ಲಾಧಿಕಾರಿಗಳು ಈ ಶೌಚಾಲಯ ನೋಡಿದರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವುದಂತೂ ಗ್ಯಾರಂಟಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/06/2022 03:30 pm

Cinque Terre

76.48 K

Cinque Terre

9

ಸಂಬಂಧಿತ ಸುದ್ದಿ