ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ:ಪೋಷಣ್ ಅಭಿಯಾನ ಬಂದ್,ವೇತನ ರಿಚಾರ್ಜ್ ಇಲ್ಲಾ ಇಲ್ಲಾ !

ಕುಂದಗೋಳ: ಗರ್ಭಿಣಿ ಮತ್ತು ಶಿಶುಗಳ ಏಳ್ಗೆ ಹೊತ್ತು ಸರ್ಕಾರ 2018 ಸಪ್ಟೆಂಬರ್ ತಿಂಗಳಲ್ಲಿ ಜಾರಿಗೆ ತಂದ ಪೋಷಣಾ ಅಭಿಯಾನ ಕಾರ್ಯಕ್ರಮ ಆರಂಭದಲ್ಲಿ ಸದ್ದು ಮಾಡಿ ಈಗ ಸ್ತಬ್ಧವಾಗಿದೆ.

ಹೌದು ! ಗರ್ಭಿಣಿಯರ ಸೀಮಂತ ಕಾರ್ಯಕ್ರಮ, ಆರು ತಿಂಗಳು ತುಂಬಿದ ಶಿಶುಗಳ ಅನ್ನಪ್ರಾಸಣ, ಮೂರು ವರ್ಷ ತುಂಬಿದ ಮಕ್ಕಳನ್ನು ಅಂಗನವಾಡಿಗೆ ನೋಂದಣಿ ಅಭಿಯಾನ, ಗರ್ಭಿಣಿ ಶಿಶುಗಳ ಅಪೌಷ್ಟಿಕತೆ ನಿವಾರಣೆಯ ನಾಲ್ಕು ಚಟುವಟಿಕೆ ಹೊತ್ತ ಪೋಷಣ್ ಅಭಿಯಾನ ಬಂದಾಗಿದೆ ಎಂದು ಹಳ್ಳಿಗರಿಗೆ ಉತ್ತರ ನೀಡಲಾಗದಂತ ಸುಳಿಗೆ ಅಂಗನವಾಡಿ ಕಾರ್ಯಕರ್ತೆಯರು ಸಿಲುಕಿದ್ದಾರೆ.

ಇದಲ್ಲದೆ ಪೋಷಣ್ ಅಭಿಯಾನ ಸ್ಥಗಿತಗೊಂಡ ಕಾರಣ ಶಿಶುಗಳ ಅಪೌಷ್ಟಿಕತೆ ಪ್ರಮಾಣ, ಮೊದಲ ಗರ್ಭವತಿಯರಿಗೆ ಅಂಗನವಾಡಿಯಲ್ಲಿ ಸಿಗುತ್ತಿದ್ದ ಚಟುವಟಿಕೆ ಬಂದ್ ಆಗಿವೆ ಪೋಷಣಾ ಅಭಿಯಾನದ ವರದಿ ಪಡೆಯಲು ಸರ್ಕಾರವೇ ನೀಡಿದ ಮೊಬೈಲ್'ಗೆ ರಿಜಾರ್ಜ್ ಸಹ ಇಲ್ಲವಾಗಿದೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಕಾರ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರ ಕಳೆದ ಮೂರು ತಿಂಗಳ ಅಂದ್ರೆ ಏಪ್ರೀಲ್‌ನಿಂದ ಇಲ್ಲಿಯವರೆಗೆ ವೇತನ ಇರದೆ ಕುಟುಂಬ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟಪಡುವ ಸ್ಥಿತಿ ಯಾರಿಗೂ ಹೇಳತಿರದು.

ಪಬ್ಲಿಕ್ ನೆಕ್ಸ್ಟ್ : ಶ್ರೀಧರ ಪೂಜಾರ

Edited By :
Kshetra Samachara

Kshetra Samachara

20/06/2022 09:49 pm

Cinque Terre

21.98 K

Cinque Terre

0

ಸಂಬಂಧಿತ ಸುದ್ದಿ