ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 10 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮ : ಜನರ ಗೋಳು ಕೇಳುವವರಾರು

ಹುಬ್ಬಳ್ಳಿ: ಇವರು ದಿನನಿತ್ಯ ದುಡಿದು ತಿನ್ನುವವರು, ಅಲ್ಪ ಸ್ವಲ್ಪ ದುಡಿದು ಮನೆಯನ್ನು ಕಟ್ಟಿಕೊಂಡಿದ್ದಾರೆ. ಆದ್ರೆ ಅವರಿಗೆ ಮೂಲಭೂತ ಸೌಲಭ್ಯಗಳು ಇಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ.

ಹೌದು,,, ಹೀಗೆ ಕೈಯಲ್ಲಿ ಮನವಿ ಪತ್ರ ಹಿಡಿದುಕೊಂಡು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಇವರು ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಗ್ರಾಮದಲ್ಲಿ ಬಸಮ್ಮ ಕಾಲೋನಿಯ ನಿವಾಸಿಗಳು. ಇವರು ಸುಮಾರು 10 ವರ್ಷಗಳಿಂದ ಕರೆಂಟ್ ಇಲ್ಲದೆ, ರಸ್ತೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ.

ಈಗಾಗಲೇ ರಾಯನಾಳ ಗ್ರಾಮ ಪಂಚಾಯತಿ ಮುಂದೆ ಧರಣಿ ಕೂಡ ಮಾಡಿದ್ದಾರೆ ಆದ್ರೆ ಯಾರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ. ಒಂದು ಸಣ್ಣ ಮಳೆಯಾದ್ರೆ ಸಾಕು ನಮಗೆ ಹೊರಗೆ ಹೋಗಲು ಬಹಳ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಜನ ಆರೋಪ ಮಾಡಿದರು.

ಜನಪ್ರತಿನಿಧಿಗಳು ಕೇವಲ ಚುನಾವಣೆ ಇದ್ದಾಗ ಮಾತ್ರ ಬರುತ್ತಾರೆ. ಅಧಿಕಾರಿಗಳು ಕೂಡ ನಮ್ಮ ಸಮಸ್ಯೆಗೆ ಸ್ಪಂದಿನೆ ನೀಡುತ್ತಿಲ್ಲ. ಈ ಅಧಿಕಾರಿಗಳು ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಕೂಡಲೆ ಗ್ರಾಮಾಧಿಕಾರಿ ಜನರ ಸಮಸ್ಯೆಯನ್ನು ಬಗೆಹರಿಸಬೇಕಿದೆ.

Edited By :
Kshetra Samachara

Kshetra Samachara

01/06/2022 04:54 pm

Cinque Terre

15.08 K

Cinque Terre

0

ಸಂಬಂಧಿತ ಸುದ್ದಿ