ನವಲಗುಂದ : ಬುಧವಾರ ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಭೇಟಿ ನೀಡಿ, ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಹಲವು ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಕಾಲವಾಡ ಗ್ರಾಮದ ಸರಕಾರಿ ಶಾಲೆ ಒತ್ತುವರಿ ಜಾಗೆ ಪರಿಶೀಲನೆ ನಡೆಸಿ, ಆರೇಕುರಹಟ್ಟಿ ಗ್ರಾಮದ ಮಲೀನವಾಗಿರುವ ಕೆರೆ ವೀಕ್ಷಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೆರೆಯನ್ನು ಸ್ವಚ್ಛಗೊಳಿಸಲು ನಿರ್ದೇಶನ ನೀಡಿದರು. ನಂತರ ಮನೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಚೆಕ್ ವಿತರಿಸಿದ ಕುರಿತು ಪರಿಶೀಲಿಸಿದರು.
ತದನಂತರ ನವಲಗುಂದ ಪಟ್ಟಣದ ನೀಲಮ್ಮನ ಕೆರೆ ಹೂಳೆತ್ತುವ ಕಾರ್ಯ ವೀಕ್ಷಣೆ ಮಾಡಿದ ಅವರು, ತಾಲೂಕು ಸರಕಾರಿ ಆಸ್ಪತ್ರೆ, ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ಘಟಕ ವೀಕ್ಷಣೆ ಮಾಡಿದರು. ನಂತರ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ, ಶಿಕ್ಷಕರ ಮತ ಕ್ಷೇತ್ರದ ಮತಗಟ್ಟೆ ಸಂಖ್ಯೆ-35 ಕ್ಕೆ ಒದಗಿಸಿರುವ ಮೂಲಭೂತ ಸೌಕರ್ಯವನ್ನು ವೀಕ್ಷಿಸಿದರು.
Kshetra Samachara
01/06/2022 04:08 pm