ಪಬ್ಲಿಕ್ ನೆಕ್ಸ್ಟ್ ವರದಿ: ವಾಲಿಕಾರ
ಹುಬ್ಬಳ್ಳಿ: ಹೆಸ್ಕಾಂ ಅಧಿಕಾರಿಗಳು ಏನಾದರು ಎಡವಟ್ಟು ಮಾಡ್ತಾ ಇರುತ್ತಾರೆ. ಆದರೆ ಇಲ್ಲಿ ಮಾಡಿರುವ ಎಡವಟ್ಟು ಮಾತ್ರ ಸಣ್ಣದಲ್ಲ. ಫುಟ್ ಪಾತ್ ಬಿಟ್ಟು ರಸ್ತೆ ಒಳಗೆ ವಿದ್ಯುತ್ ಕಂಬ ಹಾಕಿ, ಜನರ ಓಡಾಟಕ್ಕೆ ತೊಂದರೆಯನ್ನುಂಟು ಮಾಡಿದ್ದಾರೆ.
ಹೌದು. ಹೀಗೆ ಪುಟ್ ಪಾತ್ ಬಿಟ್ಟು ರಸ್ತೆಯಲ್ಲಿ ವಿದ್ಯುತ್ ಕಂಬ ಹಾಕಿರುವ ದೃಶ್ಯಗಳು ಕಂಡು ಬಂದಿದ್ದು ನಗರದ ಕೆ.ಇ.ಬಿ ಕಾಲೋನಿಯಿಂದ ಉತ್ತರಾಧಿ ಮಠ ಮುಂಭಾಗವಾಗಿ ಲಿಂಗಾರಾಜ ನಗರಕ್ಕೆ ಹೋಗುವ ರಸ್ತೆಯಲ್ಲಿ. ಇಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ಕಂಬ ನಿಲ್ಲಿಸಲಾಗಿದ್ದು ಈ ರಸ್ತೆಯಲ್ಲಿ ರಾತ್ರಿ ವೇಳೆ ಯಾರಾದರು ಕಾಣದೆ ಬಂದರೆ ಅಪಘಾತಗಳು ಸಂಭವಿಸುತ್ತವೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆದ ರಸ್ತೆ ಮತ್ತು ಫುಟ್ ಪಾತ್ ಕಾಮಗಾರಿಯೆನೋ ಆಗಿದೆ. ಆದರೆ ರಸ್ತೆಯಲ್ಲಿ ಬರುವ ವಿದ್ಯುತ್ ಕಂಬವನ್ನು ಮಾತ್ರ ಸ್ಥಳಾಂತರಿಸಿಲ್ಲ. ಈ ಕಂಬಗಳು ರಸ್ತೆಯ ಸ್ವಲ್ಪ ಭಾಗವನ್ನು ಆವರಿಸಿ ಬಿಟ್ಟಿದ್ದು, ರಾತ್ರಿ ವೇಳೆ ಈ ಕಂಬಗಳು ಕಾಣುವುದೆ ಇಲ್ಲ ಮತ್ತು ಕಂಬವಿರುವ ಯಾವುದೆ ಸೂಚನೆಯನ್ನು ಕೂಡ ಹಾಕಲಾಗಿಲ್ಲವೆಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇಲ್ಲಿ ಅಪಘಾತಗಳು ಸಂಭವಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡು ಈ ಕಂಬಗಳನ್ನು ಸ್ಥಳಾಂತರಿಸುವ ಕೇಲಸ ಆಗಬೇಕಿದೆ ಎಂಬುದು ವಾಹನ ಸಂಚಾರ ಮತ್ತು ಸ್ಥಳೀಯರ ಆಗ್ರಹವಾಗಿದೆ.
Kshetra Samachara
23/05/2022 03:58 pm