ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತಂದಿಟ್ಟ ಸ್ಮಾರ್ಟ್ ಸಿಟಿ ಅಧಿಕಾರಿಗಳು

ಪಬ್ಲಿಕ್ ನೆಕ್ಸ್ಟ್ ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ನಮ್ಮ ಹುಬ್ಬಳ್ಳಿ- ಧಾರವಾಡವನ್ನ ಅದೇನೋ ಸ್ಮಾರ್ಟ್ ಮಾಡ್ತಾ ಇದಾರೆ ನಿಜಾ. ಆದ್ರೆ ನಮಗೆ ಇವರು ತೊಂದರೆ ಕೊಡದೆ ಇದ್ರ ತಿಂದ್ ಅನ್ನ ಕರಗೋದಿಲ್ಲ ಅನಿಸುತ್ತೆ ಅಂತ ಜನ ಕಿಡಿ ಕಾರಾಕತ್ತಾರ.

ಹೌದ್ ರೀ. ಈ ಜನತಾ ಬಜಾರ್ ರೋಡ್‌ದಾಗ ಅದೇನೋ ಮಾಡಾಕ್ ಸ್ಮಾರ್ಟ್ ಸಿಟಿ ಅಧಿಕಾರಿಗಳು ದೊಡ್ಡದೊಂದ ತೆಗ್ಗ ತೆಗೆದಾರ. ಆದ್ರ ಅದಕ್ ಸುತ್ತಲೂ ಬ್ಯಾರಿಕೇಡ್ ಹಾಕದೆ ಸಂಗ ಬಿಟ್ಟಾರ. ಈ ತಗ್ಗನ್ಯಾಗ ನಿನ್ನೆ ಯುವಕನೊಬ್ಬ ಕಾಲು ಜಾರಿ ಬಿದ್ದು ಆಸ್ಪತ್ರೆ ಸೇರಿನ್ಯಾ. ಇಲ್ಲಿನ ಅಂಗಡಿಕಾರರು ಅದೆಷ್ಟೋ ಬಾರಿ ಕಂಪ್ಲೇಟ್ ಕೊಟ್ರೂ ಯಾವ ಅಧಿಕಾರಿನೂ ಕ್ಯಾರೆ ಅಂತಿಲ್ಲ. ಈ ಜನತಾ ಬಜಾರಿಗೆ ಸುತ್ತಮುತ್ತಲಿನ ಹಳ್ಳಿಗಳದ ಮಂದಿ ಬರ್ತಾರಾ. ಮೊದಲ ಮಳೆಗಾಲ ಅಪ್ಪಿತಪ್ಪಿ ಕಾಲು ಜಾರಿ ಬಿದ್ರ ಪ್ರಾಣ ಪಕ್ಷಿ ಹಾರಿ ಹೋಗೋದು ಮಾತ್ರ ಪಕ್ಕಾ.

ಒಟ್ನ್ಯಾಗ ನಮ್ ಹುಬ್ಬಳ್ಳಿ- ಧಾರವಾಡ ಅದ ಯಾವಾಗ ಸ್ಮಾರ್ಟ್ ಆಗುತ್ತೋ ಗೊತ್ತಿಲ್ಲ. ಅದೆಲ್ಲ ಹೋಗ್ಲಿ ಈಗ ಜನತಾ ಬಜಾರ್‌ನಲ್ಲಿ ತೋಡಿದ ತಗ್ಗನ್ನಾದ್ರೂ ಆದಷ್ಟು ಬೇಗ ಮುಚ್ಚಿ ಅನುಕೂಲ ಮಾಡಿಕೊಡ್ರಿ ಅನ್ನೋದು ಪಬ್ಲಿಕ್ ಆಗ್ರಹ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
Kshetra Samachara

Kshetra Samachara

19/05/2022 07:39 pm

Cinque Terre

66.31 K

Cinque Terre

14

ಸಂಬಂಧಿತ ಸುದ್ದಿ