ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಶದ ಮೊದಲ ಹಸಿರು ಸಂಚಾರಿ ಪಥ ಲೋಕಾರ್ಪಣೆ: ಪ್ರಹ್ಲಾದ್ ಜೋಶಿಯಿಂದ ಚಾಲನೆ

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಹಣೆಪಟ್ಟಿ ಹೊತ್ತಿರುವ ಹುಬ್ಬಳ್ಳಿ-ಧಾರವಾಡ, ಇಷ್ಟು ದಿನಗಳ ಕಾಲ ವಿಳಂಬ ಕಾಮಗಾರಿ ಹೆಸರಿನಲ್ಲಿ ಸುದ್ದಿಯಾಗುತ್ತಿತ್ತು. ಇದೀಗ ವಿದೇಶ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಅನುದಾನದಲ್ಲಿ ದೇಶದ 100 ನಗರಗಳ ಸ್ಮಾರ್ಟ್ ಸಿಟಿ ಯೋಜನೆಗಳ ಪೈಕಿ, ಹಸಿರು ಸಂಚಾರಿ ಪಥ (ಗ್ರೀನ್‌ ಮೊಬಿಲಿಟಿ ಕಾರಿಡಾರ್‌) ಮೊದಲನೆಯದಾಗಿ ಲೋಕಾರ್ಪಣೆಗೊಳಿಸಿ, ಜನರ ಉಪಯೋಗಕ್ಕೆ ಮುಕ್ತವಾಗಿಸಿದೆ.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಅನುದಾನದಡಿ 8 ಕೋಟಿ ರೂ. ವೆಚ್ಚದಲ್ಲಿ ಲಿಂಗರಾಜನಗರದ ಹತ್ತಿರದ ರಾಣಿ ಚೆನ್ನಮ್ಮ ನಗರದ ಸೇತುವೆ ಬಳಿ ಹಸಿರು ಸಂಚಾರಿ ಪಥ (ಗ್ರೀನ್ ಮೊಬಿಲಿಟಿ ಕಾರಿಡಾರ್) ಮೊದಲ ಹಂತವನ್ನು ಪೂರ್ಣಗೊಳಿಸಿತು. ಇದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು. ಈ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಯಿತು.

8 ಕೋಟಿ ರೂ.ವೆಚ್ಚದಲ್ಲಿ 630 ಮೀಟರ್ ಉದ್ದದ ಹಸಿರು ಸಂಚಾರ ಪಥ ನಿರ್ಮಿಸಲಾಗಿದೆ. 340 ಮೀಟರ್ ಉದ್ದ ಹಾಗೂ 3.5 ಮೀ. ಅಗಲದ ಸೈಕಲ್ ಟ್ರ್ಯಾಕ್ ಇದಾಗಿದೆ. ನಾಲಾದ ಎರಡೂ ಬದಿಗೆ 630 ಮೀ. ಗೇಬಿಯನ್ ವಾಲ್, 150 ಮೀ. ರಿಟೇನಿಂಗ್‌ ವಾಲ್‌,1170 ಮೀ. ನೈಸರ್ಗಿಕ ಜೈವಿಕ ಒಳಚರಂಡಿ ಮಾರ್ಗ, 0.5 ಎಂ.ಎಲ್.ಡಿ ನೈಸರ್ಗಿಕ ಚರಂಡಿ ನೀರು ಶುದ್ಧಿಕರಣ ಘಟಕ, ಒಂದು ಪಿಬಿಎಸ್ ನಿಲ್ದಾಣ, 1,000 ಚ.ಮೀ. ಲ್ಯಾಂಡ್ ಸ್ಕೇಪ್ ಮತ್ತು 340 ಚ.ಮೀ. ಹಾರ್ಡ್ ಸ್ಕೇಪ್, 340 ಮೀ. ಚೈನ್ ಲಿಂಕ್ ಫೆನ್ಸಿಂಗ್, 340 ಮೀ ಹ್ಯಾಂಡ್ ರೈಲಿಂಗ್, ಪಾದಚಾರಿ ಮಾರ್ಗ ಇಲ್ಲಿವೆ. ಕಾರಿಡಾರ್ ಉದ್ದಕ್ಕೂ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಚಲನ ವಲನಗಳನ್ನು ಕಮಾಂಡ್ ಆ್ಯಂಡ್ ಕಂಟ್ರೋಲ್‌ ಸೆಂಟರ್‌ನಲ್ಲಿ ದಾಖಲಿಸಲಾಗುತ್ತದೆ‌. ಮಾರ್ಗದಲ್ಲಿ 39 ವಿದ್ಯುತ್ ದೀಪಗಳಿವೆ.

ಇನ್ನೂ ಇದೇ ವೇಳೆ ಹಸಿರು ಸಂಚಾರಿ ಪಥ ಯೋಜನೆಯ 2ನೇ ಹಂತದ ಕಾಮಗಾರಿಗೆ ಭೂಮಿಪೂಜೆಯನ್ನು ನೇರವೇರಿಸಲಾಯಿತು. 96.26 ಕೋಟಿ ರೂ.ವೆಚ್ಚದಲ್ಲಿ 5 ಕಿ.ಮೀ. ಪಥವನ್ನು ಸೇತುವೆ -2 ರಿಂದ ಕಾರವಾರ ರಸ್ತೆ ಸೇತುವೆ 12 ರವರೆಗೆ ನಿರ್ಮಿಸಲಾಗುತ್ತಿದ್ದು, ಒಟ್ಟಿನಲ್ಲಿ ಆದಷ್ಟು ಬೇಗ ಕಾಮಗಾರಿಗಳು ಪೂರ್ಣಗೊಂಡು ಹು-ಧಾ ಅವಳಿ ನಗರದ ಸೌಂದರ್ಯ ಹೆಚ್ಚಾಗಲಿ ಎಂಬುದೇ ಜನರ ಆಶಯವಾಗಿದೆ.

Edited By :
Kshetra Samachara

Kshetra Samachara

10/05/2022 05:17 pm

Cinque Terre

29.91 K

Cinque Terre

26

ಸಂಬಂಧಿತ ಸುದ್ದಿ