ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್.ಎರಡೇ ದಿನದಲ್ಲಿ ಯಮಕಿಂಕರ್ ಬ್ಯಾನರ್‌ಗಳ ತೆರವುಗೆ ನಿಂತ ಅಧಿಕಾರಿಗಳು. ಜಾಹೀರಾತಿಗಾಗಿ ನಗರದಲ್ಲಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿದ್ದಾರೆ. ಅವುಗಳು ಹರಿದು ಅಪಾಯಕ್ಕೆ ಕಾಯ್ದಿದ್ದವು. ಈ ಕುರಿತು ಜನರ ಜೀವಕ್ಕೆ ಕುತ್ತಾಗಿರುವ ಚಿದ್ರ ಚಿದ್ರವಾಗಿ ಹರಿದ ಬ್ಯಾನರ್‌ಗಳಿಗೆ ಸಂಬಂಧಿಸಿದಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಮಾಡಿತ್ತು.ಈ ವರದಿಯನ್ನು ನೋಡಿದ ಜಾಹೀರಾತು ವಿಭಾಗಾಧೀಕಾರಿಗಳು ಹರಿದ ಬ್ಯಾನರ್‌ಗಳನ್ನು ತೆರವು ಮಾಡಲು ಮುಂದಾಗಿದ್ದಾರೆ.
Yes. ನಿಮ್ಮ ಪಬ್ಲಿಕ್ ನೆಕ್ಸ್ಟ್ "ವಾಣಿಜ್ಯ ನಗರಿಯ ಅಂದವನ್ನು ಹಾಳು ಮಾಡುತ್ತಿವೆ ಹರಿದ ಬ್ಯಾನರ್‌ಗಳು" ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಬಿತ್ತರಿಸಿತ್ತು. ವರದಿಗೆ ಎಚ್ಚೆತ್ತ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಹರಿದು ನೇತಾಡುತ್ತಿರುವ ಬ್ಯಾನರ್‌ಗಳನ್ನು ಕೂಡಲೆ ತೆರವು ಮಾಡುತ್ತಿದ್ದಾರೆ. ಸದ್ಯ ಗಾಳಿ ಮಳೆಯಿಂದಾಗಿ ಜನರು ಮೊದಲೆ ಭಯ ಭೀತರಾಗಿದ್ದಾರೆ. ಗಾಳಿಯ ರಭಸಕ್ಕೆ ಹರಿದ ಬ್ಯಾನರ್ ಚಲಿಸುವ ವಾಹನದ ಮೇಲೆ ಅಥವಾ ನಡೆದುಕೊಂಡು ಹೋಗುವವರ ಮೇಲೆ ಬಿದ್ದರೆ ಜೀವಕ್ಕೆ ಅಪಾಯವಾಗಿದ್ದವು. ಅದಕ್ಕಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈ ಸಂಬಂಧಿಸಿದಂತೆ ವರದಿಯನ್ನು ಬಿತ್ತರಿಸಿದ ನಂತರ, ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲ್ಯಾಮಿಂಗ್ಟನ್ ರಸ್ತೆಯಲ್ಲಿದ್ದ ಹರಿದ ಬ್ಯಾನರ್‌ನ್ನು ಈಗಾಗಲೇ ತೆರವು ಮಾಡಿದ್ದಾರೆ. ಅದೇ ರೀತಿ ನಗರದಲ್ಲಿ ಈಗಾಗಲೇ
ಹರಿದ ಜಾಹೀರಾತು ಬ್ಯಾನರ್‌ಗಳು ಸಾಕಷ್ಟಿವೆ. ಉದಾಹರಣೆಗೆ ಚನ್ನಮ್ಮ ಸರ್ಕಲ್, ವಿದ್ಯಾನಗರ ಸೇರಿದಂತೆ ಕೆಲವೆಡೆ ಇನ್ನೂ ಇವೆ. ಅವುಗಳೆಲ್ಲವನ್ನು ತೆರವು ಮಾಡಿ ಜನರ ಜೀವನವನ್ನು ಕಾಪಾಡುವುದರ ಜೊತೆಗೆ ವಾಣಿಜ್ಯ ನಗರಿಯ ಅಂದವನ್ನು ಹೆಚ್ಚಸಬೇಕಾಗಿದೆ.
Kshetra Samachara
06/05/2022 07:19 pm