ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಂಟುತ್ತಾ ಸಾಗಿರುವ ಸ್ಮಾರ್ಟ್ ಸಿಟಿಗೆ ಮಳೆಯೊಂದು ಕುಂಟು ನೆಪ!

ಹುಬ್ಬಳ್ಳಿ: ಅದು ಅವಳಿನಗರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದು. ಆ ಯೋಜನೆ ಬಂದಿದ್ದೇ ಬಂದಿದ್ದು, ಜನರ ಭರವಸೆ ಇಮ್ಮಡಿಗೊಂಡಿತ್ತು. ಆದರೆ ಆ ಯೋಜನೆ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ ಬಹುತೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹಾಗಿದ್ದರೇ ಯಾವುದು ಆ ಯೋಜನೆ ಅಂತೀರಾ ಈ ಸ್ಟೋರಿ ನೋಡಿ.

ಈಗಾಗಲೇ ಸಚಿವರು ಹಾಗೂ ಅಧಿಕಾರಿಗಳು ಹೇಳಿರುವಂತೆ ಸ್ಮಾರ್ಟ್ ಸಿಟಿ ಯೋಜನೆಯ 70% ಕಾಮಗಾರಿ ಪೂರ್ಣಗೊಂಡಿದ್ದರೂ ಕೂಡ ಇದುವರೆಗೂ ಒಂದು ಒಂದು ಸ್ಮಾರ್ಟ್ ರೂಪ ಪಡೆದುಕೊಂಡಿಲ್ಲ. ಅಲ್ಲದೆ ಸ್ಮಾರ್ಟ್ ಆಗಬೇಕಿದ್ದ ರಸ್ತೆಗಳು ಹೇಳಿಕೊಳ್ಳುವ ಮಟ್ಟಕ್ಕೆ ಸ್ಮಾರ್ಟ್ ಆಗಿಲ್ಲ. ಅಲ್ಲದೇ ಮೊನ್ನೆಯಷ್ಟೇ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ನೇತೃತ್ವದಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಕೂಡ ಆಗಿದೆ.

ಆದರೆ ಇನ್ನೂ ಅದೆಷ್ಟೋ ಕಾಮಗಾರಿಗಳು ಬಾಕಿ ಇದೆ. ಅಲ್ಲದೇ ಯೋಜನೆ ಪೂರ್ಣಗೊಂಡರೂ ಸಾರ್ವಜನಿಕರಿಗೆ ಮಾತ್ರ ಮುಕ್ತವಾಗಿಲ್ಲ. ಇದರಿಂದ ಸ್ಟಾರ್ಟ್ ಸಿಟಿ ಯೋಜನೆ ಉದ್ಘಾಟನೆಗೆ ಹಾಗೂ ಲೋಕಾರ್ಪಣೆಗೆ ಪೂರಕವಾಗಿದೆಯೇ ಎಂಬುವಂತ ಅನುಮಾನ ವ್ಯಕ್ತವಾಗುತ್ತಿದೆ. ಫಜಲ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡ ಉದ್ಘಾಟನೆ ಆದರೂ ಪಾರ್ಕಿಂಗ್ ಸಮಸ್ಯೆ ನಿವಾರಣೆ ಮಾಡಲು ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿಲ್ಲ.

ಇನ್ನೂ ಈಗಾಗಲೇ ಮುಕ್ತಾಯಗೊಳ್ಳಬೇಕಿದ್ದ ಕಾಮಗಾರಿಗಳು ಇನ್ನೂ ಕೂಡ ಆಮೆ ಗತಿಯಲ್ಲಿಯೇ ಓಡಾಡುತ್ತಿದ್ದು, ಈಗಾಗಲೇ ಮಳೆಗಾಲ ಆರಂಭವಾಗಿದ್ದು, ದಿನವೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮತ್ತಷ್ಟು ಕಾಮಗಾರಿಗಳು ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ಜನರಿಗೆ ಸ್ಮಾರ್ಟ್ ಸಿಟಿ ಕಾಮಗಾರಿ ಮಳೆಗಾಲದಲ್ಲಿಯೂ ಕೂಡ ಕಿರಿ ಕಿರಿಯನ್ನುಂಟು ಮಾಡುವುದಂತೂ ಸತ್ಯ. ಈ ಬಗ್ಗೆ ಪಾಲಿಕೆ ಆಯುಕ್ತರು ಏನು ಹೇಳ್ತಾರೆ ಕೇಳಿ.

ಒಟ್ಟಿನಲ್ಲಿ ಕುಂಟುತ್ತಾ ಸಾಗಿದ್ದ ಯೋಜನೆ ಕಾಮಗಾರಿಗೆ ಮಳೆಯೊಂದು ಕುಂಟು ನೆಪವಾಗದೇ ಆದಷ್ಟು ಬೇಗ ಯೋಜನೆ ಕಾಮಗಾರಿ ಪೂರ್ಣಗೊಂಡು ಜನರಿಗೆ ಈ ಯೋಜನೆ ಮುಕ್ತವಾಗಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Manjunath H D
Kshetra Samachara

Kshetra Samachara

06/05/2022 08:06 am

Cinque Terre

75.17 K

Cinque Terre

13

ಸಂಬಂಧಿತ ಸುದ್ದಿ